ದೇವಸ್ಥಾನದಲ್ಲಿ ಜಾಗರಣೆ ವೇಳೆ ವೇದಿಕೆ ಕುಸಿತ: ಒಂದು ಸಾವು, 17 ಜನರಿಗೆ ಗಾಯ

ಹೊಸದಿಲ್ಲಿ: ಕಲ್ಕಾಜಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮದ ವೇಳೆ ವೇದಿಕೆ ಕುಸಿದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿ, 17 ಮಂದಿ ಗಾಯಗೊಂಡ ಘಟನೆ ಶನಿವಾರ ನಡೆದಿದೆ.

ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಕೂಡಲೇ ಇಬ್ಬರು ಸೇರಿ ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಅಲ್ಲಿ ಅವರು ನಿಧನರಾಗಿದ್ದಾರೆ ಎಂದು ಘೋಷಿಸಲಾಯಿತು. ಮಹಿಳೆಯ ಗುರುತು ಪತ್ತೆಗೆ ಪ್ರಯತ್ನ ಮಾಡಲಾಗುತ್ತಿದೆ. ಗಾಯಗೊಂಡ ಕೆಲವರಿಗೆ ಮೂಳೆ ಮುರಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ ದೇವಸ್ಥಾನದಲ್ಲಿ ಜಾಗರಣಾ ಕಾರ್ಯಕ್ರಮ ನಡೆಯುತ್ತಿತ್ತು. ವೇದಿಕೆಯಲ್ಲಿ ದೇವರ ನಾಮಗಳನ್ನು ಹಾಡಲಾಗುತ್ತಿತ್ತು. ಸ್ತೋತ್ರಗಳನ್ನು ಹಾಡಿದಾಗ ಉತ್ಸುಕರಾದ ಹಲವಾರು ಭಕ್ತರು ವೇದಿಕೆಯ ಮೇಲೆ ಏರಿದರು. ಇದರಿಂದಾಗಿ ವೇದಿಕೆ ಕುಸಿದು ಬಿದ್ದಿದೆ.

Font Awesome Icons

Leave a Reply

Your email address will not be published. Required fields are marked *