ದ್ವಾರಕಾದಲ್ಲಿ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮ ಶುರು

ದ್ವಾರಕಾ: ದೇಶದ ಮೊದಲ ಜಲಾಂತರ್ಗಾಮಿ ಪ್ರವಾಸೋದ್ಯಮ ದ್ವಾರಕಾದಲ್ಲಿ ಶುರು ಮಾಡಲು ಗುಜರಾತ್ ಸರ್ಕಾರ ಮುಂದಾಗಿದೆ. ಸಮುದ್ರದ ಆಳದಲ್ಲಿ ಅವಿತುಹೋಗಿದೆ ಎಂದು ನಂಬಲಾದ ಪ್ರಾಚೀನ ನಗರವಾದ ದ್ವಾರಕಾದಲ್ಲಿ ಸಮುದ್ರ ಜೀವಿಗಳನ್ನು ಅನ್ವೇಷಿಸಲು ಈ ಯೋಜನೆಯನ್ನು ಶೀಘ್ರವೇ ಪ್ರಾರಂಭಸಲಾಗುತ್ತದೆ.

ಜಲಾಂತರ್ಗಾಮಿ ಪ್ರವಾಸೋದ್ಯಮ ಪ್ರಾರಂಭಿಸಲು ರಾಜ್ಯ ಸರ್ಕಾರವು ಮಜಗಾಂವ್ ಡಾಕ್ ಹಡಗು ನಿರ್ಮಾಣಗಾರರೊಂದಿಗೆ ಜ್ಞಾಪಕ ಪತ್ರಕ್ಕೆ ಸಹಿ ಹಾಕಿದೆ ಎಂದು ತಿಳಿದು ಬಂದಿದೆ. ಇದು ಜಲಾಂತರ್ಗಾಮಿ ನೌಕೆ ಮೂಲಕ ಸಮುದ್ರದೊಳಗೆ ಹೋಗುವ ಮೊದಲ ಅಂಡರ್​ವಾಟರ್​ ಪ್ರವಾಸೋದ್ಯಮವಾಗಲಿದೆ.

ಅಕ್ಟೋಬರ್ 2024ರಲ್ಲಿ ದೀಪಾವಳಿ ಹಬ್ಬಕ್ಕೂ ಮುನ್ನ ಈ ಯೋಜನೆಯನ್ನು ಕಾರ್ಯಗತಗೊಳಿಸಲಿದೆ. ಪ್ರವಾಸಿಗರನ್ನು ಜಲಾಂತರ್ಗಾಮಿ ಮೂಲಕ ಸಮುದ್ರದ ಬದುಕನ್ನು ನೋಡಲು 100 ಮೀಟರ್‌ ಆಳದವರೆಗೂ ಕರೆದುಕೊಂಡು ಹೋಹಲಾಗುತ್ತದೆ. ಪ್ರತಿ ಜಲಾಂತರ್ಗಾಮಿ ನೌಕೆಯು 24 ಪ್ರವಾಸಿಗರನ್ನು ಹೊತ್ತೊಯ್ಯುತ್ತದೆ ಮತ್ತು ನೌಕೆಯನ್ನು ಇಬ್ಬರು ಅನುಭವಿ ಪೈಲಟ್‌ಗಳು ಹಾಗೂ ವೃತ್ತಿಪರ ಸಿಬ್ಬಂದಿಗಳು ಇರಲಿದ್ದಾರೆ.

Font Awesome Icons

Leave a Reply

Your email address will not be published. Required fields are marked *