‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾದ ಟೀಸರ್ ಬಿಡುಗಡೆ

ಬೆಂಗಳೂರು:  ‘ಧೈರ್ಯಂ ಸರ್ವತ್ರ ಸಾಧನಂ’ ಸಿನಿಮಾದ ಟೀಸರ್​ ಅನ್ನು ಖ್ಯಾತ ನಟ ವಸಿಷ್ಠ ಸಿಂಹ ಅವರು ಬಿಡುಗಡೆ ಮಾಡಿದ್ದಾರೆ. ಸಿನಿಮಾದ  ಟೀಸರ್ ನೋಡಿ ಪ್ರೇಕ್ಷಕರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ.

ಮಲಗಿರುವ ವ್ಯಕ್ತಿಯ ಬೆನ್ನಿನ ಮೇಲೆ ಇನ್ನೂ ಮೂವರು ಒಬ್ಬರ ಮೇಲೊಬ್ಬರಂತೆ ನಿಂತುಕೊಂಡಿರುವುದು ಈ ಟೀಸರ್​ನಲ್ಲಿ ಹೈಲೈಟ್​ ಆಗಿದೆ. ಅದರ ಹಿಂದಿರುವ ಕಥೆ ಏನು ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಟೀಸರ್ ಬಿಡುಗಡೆ ಮಾಡಿ ‘ಒಳ್ಳೆಯ ಸಂದೇಶದ ಜೊತೆಗೆ, ಸಮಾಜದಲ್ಲಿ ನಡೆದಿರುವ ವಿಷಯಗಳನ್ನು ಪರೆದೆ ಮೇಲೆ ತೋರಿಸಿರುವುದು ಟೀಸರ್​ನಲ್ಲಿ ಕಾಣಿಸಿದೆ. ಇಂತಹ ಚಿತ್ರಗಳು ಜನರಿಗೆ ಹೆಚ್ಚು ತಲುಪಬೇಕು’ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.

ಅದೇ ರೀತಿ, ‘ಸೂಪರ್ ಸ್ಟಾರ್’ ರಜನಿಕಾಂತ್ ಅವರ ಸಿನಿಮಾಗೆ ನಿರ್ದೇಶನ ಮಾಡಿರುವ ತಮಿಳಿನ ಪಾ. ರಂಜಿತ್ ಅವರು ಸೋಶಿಯಲ್​ ಮೀಡಿಯಾದಲ್ಲಿ ಈ ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ.

‘ಎ2’ ಮ್ಯೂಸಿಕ್​ ಮೂಲಕ ಬಿಡುಗಡೆ ಆಗಿರುವ ಈ ಸಿನಿಮಾ ಯಾವುದೇ ಗ್ರಾಫಿಕ್ಸ್ ಬಳಸದೆ ರಿಯಲಿಸ್ಟಿಕ್​ ಆಗಿ ಚಿತ್ರೀಕರಣ ಮಾಡಿದೆ.

ಈ ಸಿನಿಮಾದಲ್ಲಿ ಹೀರೋ ಆಗಿ ವಿವಾನ್ ಕೆ.ಕೆ. ನಟಿಸಿದ್ದಾರೆ. ನಾಯಕಿಯಾಗಿ ಅನುಷಾ ರೈ ಅಭಿನಯಿಸಿದ್ದಾರೆ. ಇನ್ನುಳಿದ ಪ್ರಮುಖ ಪಾತ್ರಗಳಲ್ಲಿ ಯಶ್‌ಶೆಟ್ಟಿ, ಚಕ್ರವರ್ತಿ ಚಂದ್ರಚೂಡ್, ಬಾಲ ರಾಜವಾಡಿ, ವರ್ಧನ್, ಪ್ರದೀಪ್‌ ಪೂಜಾರಿ, ರಾಮ್‌ ಪವನ್ ಶೆಟ್ಟಿ, ರಾಮ್‌ ನಾಯಕ್, ಅರ್ಜುನ್‌ ಪಾಳೆಗಾರ, ಪದ್ಮಿನಿ ಶೆಟ್ಟಿ, ಹೊಂಗಿರಣ ಚಂದ್ರು ಮುಂತಾದವರು ನಟಿಸಿದ್ದಾರೆ.

ಎ.ಆರ್. ಸಾಯಿರಾಮ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ.  ರವಿಕುಮಾರ್ ಸನಾ ಅವರ ಛಾಯಾಗ್ರಹಣ, ಕುಂಗ್​ಫು ಚಂದ್ರು ಅವರು ಸಾಹಸ ನಿರ್ದೇಶನ ಹಾಗೂ ಕ್ಯಾಪ್ಟನ್ ಕಿಶೋರ್ ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಐದು ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಅವರು ಸಂಗೀತ ನೀಡಿದ್ದಾರೆ. ಕಿನ್ನಾಳ್‌ರಾಜ್ ಅವರು ಸಾಹಿತ್ಯ ಬರೆದಿದ್ದಾರೆ.

Font Awesome Icons

Leave a Reply

Your email address will not be published. Required fields are marked *