ಧೋನಿ ಅಭಿಮಾನಿ ಆತ್ಮಹತ್ಯೆಗೆ ಶರಣು; ಆರ್ಥಿಕ ಸಂಕಷ್ಟವೇ ಕಾರಣ

ಚೆನ್ನೈ: ಧೋನಿಯ ಅಪ್ಪಟ ಅಭಿಮಾನಿ ಗೋಬಿ ಕೃಷ್ಣನ್‌ ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತಮ್ಮ ಮನೆಗೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಬಣ್ಣವಾದ ಹಳದಿ ಪೇಂಟ್ ಮಾಡಿಸಿದ್ದು, ಅದಕ್ಕೆ ಹೋಮ್‌ ಆಫ್‌ ಧೋನಿ ಫ್ಯಾನ್ ಅಥವ ಧೋನಿ ಅಭಿಮಾನಿಯ ಮನೆ ಎಂಬ ಹೆಸರನ್ನಿಟ್ಟಿದ್ದರು.

ತಮಿಳುನಾಡಿನ ಕುಡ್ಡಲೂರು ಜಿಲ್ಲೆಯ ತಿತ್ತಕುಡಿ ನಿವಾಸಿಯಾಗಿರುವ ಕೃಷ್ಣನ್‌ ತಮ್ಮ ಮನೆಯ ಗೋಡೆಯಲ್ಲಿ ರೂ 1.5 ಲಕ್ಷ ಖರ್ಚಿನಲ್ಲಿ ಧೋನಿಯ ಚಿತ್ರ ಬರೆಸಿ ಸುದ್ದಿಯಾಗಿದ್ದರು. ಅವರ ಅಭಿಮಾನವನ್ನು ಸ್ವತಃ ಧೋನಿಯವರು ಕೊಂಡಾಡಿದ್ದರು.

ದುಬೈಯಲ್ಲಿ ಜರ್ಮನ್‌ ಟ್ರೇಡಿಂಗ್‌ ಕಂಪನಿಯೊಂದರಲ್ಲಿ ಮಾರ್ಕೆಟ್‌ ಅನಾಲಿಸ್ಟ್‌ ಆಗಿದ್ದ ಕೃಷ್ಣನ್ ಒಂದೆರಡು ವರ್ಷಗಳ ಹಿಂದೆ ಭಾರತಕ್ಕೆ ಮರಳಿದ್ದರು. ಅನಂತರ ಸಾಲ ಮಾಡಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದರು. ಅದರಲ್ಲಿ ತೀವ್ರ ನಷ್ಟ ಅನುಭವಿಸಿದ್ದರು.

ಬುಧವಾರ ಪೊಂಗಲ್ ಆಚರಣೆಯ ವೇಳೆ ವಾಗ್ವಾದ ಏರ್ಪಟ್ಟಿದ್ದು, ಮರುದಿನ ಸಾವಿಗೆ ಶರಣಾಗಿದ್ದಾರೆ.

Font Awesome Icons

Leave a Reply

Your email address will not be published. Required fields are marked *