ನಕಲಿ ನೋಟ್ ಪ್ರಿಂಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರು ಅರೆಸ್ಟ್

ಹೈದರಾಬಾದ್: ನಕಲಿ ನೋಟ್ ಪ್ರಿಂಟಿಂಗ್ ದಂಧೆಯಲ್ಲಿ ತೊಡಗಿದ್ದ ಇಬ್ಬರೂ ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ವೆಬ್ ಸೀರಿಸ್ ಒಂದರಿಂದ ಪ್ರೇರಣೆ ಪಡೆದು ಈ ಕೃತ್ಯ ಮಾಡಿದ್ದಾನೆ ಎನ್ನಲಾಗಿದೆ. ವನಂ ಲಕ್ಷ್ಮೀನಾರಾಯಣ ಹಾಗೂ ಆತನ ಸಹಚರ ಎರುಕಳ ಪ್ರಣಯ್ ಕುಮಾರ್ ಎಂದು ಆರೋಪಿಗಳನ್ನು ಗುರುತಿಸಲಾಗಿದೆ.

ಆರೋಪಿ ವನಂ ಲಕ್ಷ್ಮೀನಾರಾಯಣ ಕೃತ್ಯಕ್ಕಾಗಿ ಸ್ಕ್ರೀನ್ ಪ್ರಿಂಟರ್, ಗ್ರೀನ್ ಫಾಯಿಲ್ ಪೇಪರ್, ಜೆಕೆ ಎಕ್ಸೆಲ್ ಬಾಂಡ್ ಪೇಪರ್‌ಗಳು, ಕಟರ್‌ಗಳು ಮತ್ತು ಲ್ಯಾಮಿನೇಷನ್ ಯಂತ್ರವನ್ನು ಬಳಸುತ್ತಿದ್ದ ಮತ್ತು ಪ್ರಣಯ್ ಕುಮಾರ್ ತಯಾರಿಸಿದ ನಕಲಿ ನೋಟ್‍ಗಳನ್ನು, ಮಾರುಕಟ್ಟೆ ಹಾಗೂ ಇನ್ನಿತರ ಸ್ಥಳಗಳಲ್ಲಿ ಚಲಾವಣೆ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

ಈತ ಅಂಗಡಿಯೊಂದರಲ್ಲಿ 20 ಸಾವಿರ ರೂ. ನಕಲಿ ನೋಟ್ ಚಲಾವಣೆ ಮಾಡುವ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ವಿಚಾರಣೆ ನಡೆಸಿದಾಗ ಪ್ರಮುಖ ಆರೋಪಿಯ ಹೆಸರನ್ನು ಈತ ಹೇಳಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

Font Awesome Icons

Leave a Reply

Your email address will not be published. Required fields are marked *