ನಟಿ ನವ್ಯಾ ನಾಯರ್ ವಿರುದ್ಧ ಎಫ್​ಐಆರ್

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ನವ್ಯಾ ನಾಯರ್ ವಿರುದ್ಧ ಇಡಿ ದೂರು ದಾಖಲಿಸಿದೆ. ಭ್ರಷ್ಟಾಚಾರ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧನಕ್ಕೆ ಒಳಗಾಗಿರುವ ಅಧಿಕಾರಿ ಸಚಿನ್ ಸಾವಂತ್ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ನಟಿ ನವ್ಯಾ ನಾಯರ್, ಅಧಿಕಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಉಡುಗೊರೆಗಳನ್ನು, ಹಣವನ್ನು ಪಡೆದಿದ್ದಾರೆ ಎನ್ನಲಾಗಿದೆ.

2011ರಿಂದ 2020ರ ಅವಧಿಯಲ್ಲಿ ಆದಾಯಕ್ಕಿಂತ 2 ಕೋಟಿ 46 ಲಕ್ಷ ರೂ.ಗಳಷ್ಟು ಆಸ್ತಿ ಸಂಪಾದಿಸಿರುವ ಐಆರ್​ಎಸ್ ಅಧಿಕಾರಿ ಸಚಿನ್ ಸಾವಂತ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಈ ಪ್ರಕರಣದ ಆಧಾರದ ಮೇಲೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಹಾಗು ನವ್ಯ ನಾಯರ್ ವಿರುದ್ಧ ಎಫ್ ಐ ಆರ್ ದಾಖಲಿಸಿದೆ.

ಈ ಪ್ರಕರಣದ ತನಿಖೆ ವೇಳೆ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಖ್ಯಾತ ನಟಿಯಾಗಿರುವ ನವ್ಯಾ ನಾಯರ್ ಅವರೊಂದಿಗೆ ಸಚಿನ್ ಸಾವಂತ್ ಡೇಟಿಂಗ್ ವಿಚಾರ ಹೊರಬಿದ್ದಿದೆ.

ಸಚಿನ್ ಸಾವಂತ್ ಅವರು ಸುಮಾರು 10 ಬಾರಿ ಕೊಚ್ಚಿಗೆ ಭೇಟಿ ನೀಡಿ ನವ್ಯಾ ನಾಯರ್ ಅವರಿಗೆ ಆಭರಣ ಸೇರಿದಂತೆ ದುಬಾರಿ ವಸ್ತುಗಳನ್ನು ಉಡುಗೊರೆಯಾಗಿ ನೀಡಿರುವುದು ಪತ್ತೆಯಾಗಿದೆ.

ಇನ್ನು ಈ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ನವ್ಯಾ ನಾಯರ್ ” ನಾವಿಬ್ಬರು ನೆರೆಹೊರೆಯಾವರಾಗಿದ್ದರಿಂದ ನಮ್ಮ ನಡುವೆ ಉತ್ತಮ ಗೆಳತನವಿದೆ. ಇದರ ಹೊರತಾಗಿ ಬೇರೆ ಯಾವುದೇ ಸಂಬಂಧವಿಲ್ಲ. ನನ್ನ ಮಗನ ಹುಟ್ಟುಹಬ್ಬಕ್ಕೆ ಅವರು ಆಭರಣ ಉಡುಗೊರೆ ನೀಡಿದ್ದರು. ಅವರ ಹಣಕಾಸಿನ ವ್ಯವಹಾರಗಳಿಗೂ ನಮಗೂ ಯಾವುದೇ ಸಂಬಂಧವಿಲ್ಲ” ಎಂದು ತಿಳಿಸಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *