ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್ ಚಡ್ಡಾ ಮದುವೆ ಡೇಟ್ ಕೊನೆಗೂ ಫಿಕ್ಸ್ ಆಗಿದೆ. ನಿಶ್ಚಿತಾರ್ಥ ನಂತರ ಈ ಜೋಡಿ ಯಾವಾಗ ಮದುವೆ ಆಗುತ್ತಾರೆ ಎನ್ನುವ ಪ್ರಶ್ನೆಯನ್ನು ಅಭಿಮಾನಿಗಳು ಕೇಳಿದ್ದರು. ಕೊನೆಗೂ ಮದುವೆ ದಿನವನ್ನು ಈ ಜೋಡಿ ಫಿಕ್ಸ್ ಮಾಡಿದೆ.
ಸೆಪ್ಟೆಂಬರ್ 25 ರಂದು ಇವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ರಾಜಸ್ಥಾನದಲ್ಲಿ ಅದ್ದೂರಿಯಾಗಿಯೇ ಮದುವೆ ಸಮಾರಂಭ ನಡೆಯಲಿದೆ. ಮೇ 13ರಂದು ನವದೆಹಲಿಯಲ್ಲಿ ಪರಿಣಿತಿ ಚೋಪ್ರಾ ಹಾಗೂ ಸಂಸದ ರಾಘವ್ ಚಡ್ಡಾ ಎಂಗೇಜ್ ಮೆಂಟ್ ಮಾಡಿಕೊಳ್ಳುವ ಮೂಲಕ ಹೊಸ ಜೀವನಕ್ಕೆ ಕಾಲಿಡಲು ಮುಂದಾಗಿದ್ದರು.
ಎಂಗೇಜ್ ಮೆಂಟ್ ದಿನ ಪರಿಣಿತಿ ಹಾಗೂ ರಾಘವ್ ಲಿಪ್ ಲಾಕ್ ಮಾಡಿಕೊಂಡ ವಿಡಿಯೋ ಸಖತ್ ವೈರಲ್ ಆಗಿತ್ತು.