ನಟಿ ಲೀಲಾವತಿ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ

ಬೆಂಗಳೂರು: ಹಿರಿಯ ನಟಿ ಲೀಲಾವತಿ ಅವರು ಅನಾರೋಗ್ಯದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರ ಸೋಲದೇವನಹಳ್ಳಿಯ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿದ್ದಾರೆ.

New Project 12 1

ಲೀಲಾವತಿ ಅವರ ಆರೋಗ್ಯ ಕುಶಲೋಪರಿ ವಿಚಾರಿಸಿದ್ದಾರೆ ಸಿಎಂ. ʻʻನಾನು ನೆಲಮಂಗಲಕ್ಕೆ ಬಂದಿದ್ದೆ. ಲೀಲಾವತಿ ಅವರ ಆರೋಗ್ಯ ವಿಚಾರಿಸಲು ಬಂದೆ.. ಈ ಜಮೀನಿನ ಸಮಸ್ಯೆ ಇದ್ದಾಗ ನನ್ನನ್ನು ಭೇಟಿ ಮಾಡಿದ್ದರು. ಲೀಲಾವತಿ ನೈಜ ಕಲಾವಿದೆ. ಅವರನ್ನ ಆಸ್ಪತ್ರೆಗೆ ಸೇರಿಸಿದರೆ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತೇವೆ. ಸರ್ಕಾರದಿಂದ ಯಾವುದೇ ಸಹಾಯ ಬೇಕಿದ್ದರೂ ನಾವು ಕೊಡುತ್ತೇವೆʼʼ ಎಂದು ಭರವಸೆ ಕೊಟ್ಟರು.

New Project 10 1

ಇದಕ್ಕೂ ಮುಂಚೆ ನಟ ದರ್ಶನ್‌, ಅರ್ಜುನ್ ಸರ್ಜಾ, ನಟ ಶಿವರಾಜಕುಮಾರ್‌ ಮತ್ತು ಗೀತಾ ದಂಪತಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್‌ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಿದ್ದರು. ಇದೇ ವೇಳೆ ಲೀಲಾವತಿ ಅವರ ಸ್ವಗ್ರಾಮದಲ್ಲಿ ನಿರ್ಮಿಸಿರುವ ಪಶು ಆಸ್ಪತ್ರೆಯನ್ನು ಡಿ.ಕೆ. ಶಿವಕುಮಾರ್‌ ಉದ್ಘಾಟಿಸಿದ್ದರು. ಇದು ಲೀಲಾವತಿ ಅವರ ಕನಸಿನ ಆಸ್ಪತ್ರೆಯಾಗಿತ್ತು.

https://newskannada.com/gandhi-nagar/sandalwood/shivarajkumar-and-geetha-meets-to-leelavathi/28112023

Font Awesome Icons

Leave a Reply

Your email address will not be published. Required fields are marked *