ನಟಿ ಲೀಲಾವತಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಬಂದ ನಟ ಶಿವಣ್ಣ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಅವರು ನಿಧನರಾಗಿದ್ದಾರೆ. ನೆಲಮಂಗಲ ಖಾಸಗಿ ಆಸ್ಪತ್ರೆಯಲ್ಲಿ ಲೀಲಾವತಿ ಅವರು ವಿಧಿವಶರಾಗಿದ್ದು, ಗಣ್ಯರು ಕಂಬನಿ ಮಿಡಿಯುತ್ತಿದ್ದಾರೆ. ಲೀಲಾವತಿ ಅವರು ಕೊನೆಯುಸಿರೆಳೆದ ಸುದ್ದಿ ತಿಳಿಯುತ್ತಿದ್ದಂತೆ ನಟ ಶಿವರಾಜ್ ಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ನಿಧನರಾದ ಲೀಲಾವತಿ ಅವರನ್ನು ಕಂಡ ಶಿವರಾಜ್‌ಕುಮಾರ್ ಕಣ್ಣೀರು ಹಾಕಿದ್ದಾರೆ.

ಕೆಲ ತಿಂಗಳಲ್ಲಿ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೀಲಾವತಿ ಅವರು ತಮ್ಮ ತೋಟದ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಲೀಲಾವತಿ ಅವರ ಮನೆಗೆ ತೆರಳಿದ್ದ ಶಿವರಾಜ್ ಕುಮಾರ್ ಅವರು ಆರೋಗ್ಯ ವಿಚಾರಿಸಿದ್ದರು. ಲೀಲಾವತಿ ಅವರನ್ನು ಮಾತನಾಡಿಸಿದ್ದ ಶಿವಣ್ಣ ನನ್ನ ಅಮ್ಮನ ನೆನಪಾಯಿತು ನನಗೆ ಎಂದಿದ್ದರು.

ಇಂದು ತೀವ್ರ ಅಸ್ವಸ್ಥರಾದ ಹಿನ್ನಲೆೆಯಲ್ಲಿ ಲೀಲಾವತಿ ಅವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಆಸ್ಪತ್ರೆಯಲ್ಲಿ ಲೀಲಾವತಿ ಅವರು ಕೊನೆಯುಸಿರೆಳೆದಿದ್ದು, ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ.

Font Awesome Icons

Leave a Reply

Your email address will not be published. Required fields are marked *