ಬೆಂಗಳೂರು: ನಟ ನಾಗಭೂಷಣ್ಗೆ ಶಾಕ್ ಮೇಲೆ ಶಾಕ್ ಎದುರಾಗ್ತಿದೆ. ಕಾರು ಅಪಘಾತ ಮಾಡಿ ಪಾದಚಾರಿ ಮಹಿಳೆ ಪ್ರೇಮಾ ಅವರ ಸಾವಿಗೆ ಕಾರಣರಾದ ನಟ ನಾಗಭೂಷಣ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗುವ ಸಾಧ್ಯತೆ ಇದೆ ಎನ್ನಲಾಗ್ತಿದೆ. ಕಾರು ಅಪಘಾತದಿಂದ ವಿದ್ಯುತ್ ಕಂಬಕ್ಕೆ ಹಾನಿಯಾಗಿರುವ ಸಂಬಂಧ ನಟನ ವಿರುದ್ಧ ಬೆಸ್ಕಾಂ ಪೊಲೀಸರಿಗೆ ದೂರು ನೀಡಲಿದೆ.
ಮತ್ತೊಂದು ಕೇಸ್ ದಾಖಲಿಸಿಕೊಳ್ಳಲು ಕುಮಾರಸ್ವಾಮಿ ಲೇಔಟ್ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಟ್ರಾಫಿಕ್ ಪೊಲೀಸರು ವಿದ್ಯುತ್ ಕಂಬಕ್ಕೆ ಹಾನಿಯಾದ ಬಗ್ಗೆ ಬೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಹಾನಿ ಬಗ್ಗೆ ದೂರು ನೀಡುವಂತೆ ಬೆಸ್ಕಾಂ ಎಇಗೆ ಪೊಲೀಸರು ಸೂಚಿಸಿದ್ದಾರಂತೆ. ಇಂದು ನಾಗಭೂಷಣ್ ಮೇಲೆ ಬೆಸ್ಕಾಂ ಅಧಿಕಾರಿಗಳು ದೂರು ನೀಡುವ ಸಾಧ್ಯತೆ. ಹಾಗಾಗಿ ದೂರು ಪಡೆದು ಮತ್ತೊಂದು ಎಫ್ಐಆರ್ ದಾಖಲಿಸಲು ಕೆ ಎಸ್ ಲೇಔಟ್ ಸಂಚಾರ ಪೊಲೀಸರು ಮುಂದಾಗಿದ್ದಾರೆ ಎಂದು ವರದಿಯಾಗಿದೆ.