ನನ್ನ ಕುಟುಂಬಕ್ಕೆ ಭಾರೀ ಅನ್ಯಾಯ: ಕಾರ್ಯಕರ್ತರ ಜೊತೆ ಚರ್ಚಿಸಿ ಮುಂದಿನ ತೀರ್ಮಾನ- ಕಾಂಗ್ರೆಸ್ ಶಾಸಕ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

kannada t-shirts

ನವದೆಹಲಿ,ಮಾರ್ಚ್,20,2024(www.justkannada.in): ಬಾಗಲಕೋಟೆ ಕ್ಷೇತ್ರದಿಂದ ಪತ್ನಿ ವೀಣಾ ಕಾಶಪ್ಪನವರ್ ಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪುವ ಭೀತಿ, ಸಂಯುಕ್ತ ಪಾಟೀಲ್ ಗೆ ಟಿಕೆಟ್ ಸಾಧ್ಯತೆ ಹಿನ್ನೆಲೆ ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮದವರ ಜೊತೆ ಮಾತಾಡಿದ ಶಾಸಕ ವಿಜಯಾನಂದ ಕಾಶಪ್ಪನವರ್, ಸಂಯುಕ್ತ ಪಾಟೀಲ್ ಯಾರು ಅನ್ನೋದು ಬಾಗಲಕೋಟೆ ಜಿಲ್ಲೆಯ ಯಾವ ಶಾಸಕನಿಗೂ ಗೊತ್ತಿಲ್ಲ, ತಮ್ಮ ಕುಟುಂಬಕ್ಕೆ ಯಾಕೆ ಅನ್ಯಾಯ ಮಾಡಿದ್ದಾರೋ ಗೊತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಯುಕ್ತ ಪಾಟೀಲ್  ತಮ್ಮನ್ನು ಯಾವತ್ತೂ ಭೇಟಿಯಾಗಿಲ್ಲ, ಅಸಲಿಗೆ ಅವರು ಟಿಕೆಟ್  ರೇಸ್ ನಲ್ಲಿರಲಿಲ್ಲ, ತನ್ನ ಪತ್ನಿ ಮತ್ತು ಅಜಯಕುಮಾರ್ ಸರ್ನಾಯಕ್-ಇಬ್ಬರ ಹೆಸರುಗಳನ್ನು ಮಾತ್ರ ಸಿಇಸಿಗೆ ಕಳಿಸಲಾಗಿತ್ತು. ಆದರೆ ಇಲ್ಲಿಗೆ ಬಂದು ನೋಡಿದಾಗ ಸ್ಕ್ರೀನಿಂಗ್ ಕಮಿಟಿ ಮುಂದಿದ್ದ ಪಟ್ಟಿಯಲ್ಲಿ ವೀಣಾ ಹೆಸರೇ ಇರಲಿಲ್ಲ  ಎಂದು ವಿಜಯಾನಂದ ಕಾಶಪ್ಪನವರ್ ಬೇಸರ ವ್ಯಕ್ತಪಡಿಸಿದರು.

ತಾನೊಬ್ಬ ಪಕ್ಷದ ಕಟ್ಟಾಳು ಮತ್ತು ಜವಾಬ್ದಾರಿಯುತ ಶಾಸಕನಾಗಿರುವುದರಿಂದ ಬಂಡೇಳುವ ಪ್ರಶ್ನೆ ಉದ್ಭವಿಸಲ್ಲ, ಅದರೆ ವಾಪಸ್ಸು ಹೋಗಿ ಕಾರ್ಯಕರ್ತರು, ಸಮುದಾಯದವರೊಂದಿಗೆ  ಚರ್ಚೆ ಮಾಡಿ ಮುಂದಿನ ನಡೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ, ಚುನಾವಣೆಯನ್ನು ಅವರೇ ಮಾಡಿಕೊಳ್ಳಲಿ ಎಂದು ಕಿಡಿಕಾರಿದರು.

Key words: bagalakote-ticket-Veena kashappanavar – Congress –MLA- Vijayananda kashappanavar

website developers in mysore

Font Awesome Icons

Leave a Reply

Your email address will not be published. Required fields are marked *