ನಶೆ ಮತ್ತಲ್ಲಿ ನಡು ರಸ್ತೆಯಲ್ಲೇ ತೂರಾಡಿದ ಯುವತಿಯರು; ಎಸ್ಪಿ ಪುತ್ರನ ಮೇಲೆ ಹಲ್ಲೆ

ಬೆಂಗಳೂರು: ಹೊಸ ವರ್ಷವನ್ನು ಅದ್ದೂರಿಯಾಗಿ ಬರ ಮಾಡಿಕೊಳ್ಳಲಾಗಿದೆ. ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೋರಮಂಗಲ, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಇಂದಿರಾನಗರ ಸೇರಿದಂತೆ ಎಲ್ಲೆಡೆ ಪಾರ್ಟಿ ಮುಗಿದ ಬಳಿಕ ಯುವಕ, ಯುವತಿಯರು ಕುಡಿದು ತೂರಾಡಿದ್ದಾರೆ. ಕುಡಿದು ಪ್ರಜ್ಞೆ ತಪ್ಪಿದ ಯುವತಿಯರನ್ನ ಪೊಲೀಸರು ಸೇಫ್ಟಿ ಹೈಲ್ಯಾಂಡ್‌ಗೆ ರವಾನಿಸಿದರು.

ಎಂಜಿ ರೋಡ್‌, ಬ್ರಿಗೇಡ್‌ ರೋಡ್‌ಗೆ ಅಂದಾಜು ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ಬಂದೋಬಸ್ತ್‌ ಕೈಗೊಂಡಿದ್ರೂ ಕೂಡ ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ.

ಮತ್ತೊಂದೆಡೆ ಹೊಸ ವರ್ಷ ಸಂಭ್ರಮಾಚರಣೆಗೆ ನಗರಕ್ಕೆ ಬಂದಿದ್ದ ಕೇರಳದ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪುತ್ರನ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಬೆಂಗಳೂರಿನ ಡೈರಿ ಸರ್ಕಲ್ ಬಳಿಯ ಕ್ರೈಸ್ಟ್ ಕಾಲೇಜು ಬಳಿ ಘಟನೆ ನಡೆದಿದೆ. ಸ್ಟಾಲಿನ್ ಹಲ್ಲೆಗೊಳಗಾದ ಯುವಕ. ನ್ಯೂ ಇಯರ್​ ಪಾರ್ಟಿಗೆಂದು ಯುವಕ ಸ್ಟಾಲಿನ್​ ಕೇರಳದಿಂದ ಬೆಂಗಳೂರಿಗೆ ಬಂದಿದ್ದಾನೆ. ಸ್ಟಾಲಿನ್​ ತನ್ನ ಗೆಳೆಯರ ಜೊತೆ ಪಬ್​ನಲ್ಲಿ ಪಾರ್ಟಿ ಮಾಡುತ್ತಿದ್ದನು.ಕೆಲ ಹೊತ್ತಿನ ಬಳಿಕ ಸ್ಟಾಲಿನ್​​ ಗೆಳೆಯರು ಪಬ್​ನಿಂದ ಹೊರಗೆ ಬಂದಿದ್ದಾರೆ. ಹೀಗೆ ಹೊರಗೆ ಬಂದವರು ಯುವತಿಯನ್ನು ಟಚ್​ ಮಾಡಿದ್ದಾರೆ ಎಂದು ಸ್ಟಾಲಿನ್​ ಗೆಳಯರ ಜೊತೆ ಇಬ್ಬರು ಯುವಕರು ಜಗಳ ತೆಗೆದಿದ್ದಾರೆ. ಇದನ್ನು ತಿಳಿದ ಸ್ಟಾಲಿನ್,​ ಏನಾಯ್ತು ಎಂದು ಘಟನಾ ಸ್ಥಳಕ್ಕೆ ಬಂದು ನೋಡುತ್ತಿದ್ದಾಗ ಆ ಇಬ್ಬರು ಯುವಕರು ಸ್ಟಾಲಿನ್ ಮೇಲೂ ಹಲ್ಲೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಗಲಾಟೆ ತಡೆದಿದ್ದಾರೆ.

Font Awesome Icons

Leave a Reply

Your email address will not be published. Required fields are marked *