ನಾನು ದಿನವೂ ಕುಡಿಯುತ್ತಿದ್ದೆ ಎಂದ ನಟಿ ಯಾರು

ಮುಂಬೈ: ಖ್ಯಾತ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆಗಾಗ್ಗೆ ಮಾತಾಡ್ತಾ ಇರುತ್ತಾರೆ. ಬಾಯ್ ಫ್ರೆಂಡ್, ಡಿಪ್ರೆಷನ್ ಹೀಗೆ ಅನೇಕ ವಿಚಾರಗಳನ್ನು ಈವರೆಗೂ ಮಾತನಾಡಿದ್ದಾರೆ.

ಈ ಬಾರಿ ಕುಡಿತ ಮತ್ತು ಡ್ರಗ್ಸ್ ಬಗ್ಗೆ ಮಾತನಾಡಿದ್ದಾರೆ. ತಾನು ಕುಡಿತದ ಚಟಕ್ಕೆ ದಾಸಳಾಗಿದ್ದೆ ಎನ್ನುವುದನ್ನು ಹೇಳಿಕೊಂಡಿದ್ದಾರೆ.

ನಾನು ಸಾಕಷ್ಟು ಕುಡಿತಿದ್ದೆ. ಫ್ರೆಂಡ್ಸ್ ಸಿಕ್ಕಾಗೆಲ್ಲ ಕುಡಿತಿದ್ದೆ. ಕುಡಿತದ ಚಟ ನನ್ನನ್ನು ಆಳುತ್ತಿದೆ ಅಂತ ಅನಿಸಿತು. ಕುಡಿತದ ಬಗ್ಗೆ ಬೇಸರವಾಯಿತು. ಆಗ ಬಿಟ್ಟು ಬಿಟ್ಟು. ನಾನು ಕುಡಿಯೋದನ್ನು ಬಿಟ್ಟು ಎಂಟು ವರ್ಷಗಳೇ ಆಗಿವೆ. ಕುಡಿತಿದ್ದೆ ನಿಜ. ಆದರೆ, ಡ್ರಗ್ಸ್ ತಗೆದುಕೊಳ್ಳುತ್ತಿರಲಿಲ್ಲ. ಇವತ್ತಿನವರೆಗೂ ನಾನು ಒಂದೇ ಒಂದು ಬಾರಿಯೂ ಡ್ರಗ್ಸ್ ತೆಗೆದುಕೊಂಡಿಲ್ಲ ಎಂದಿದ್ದಾರೆ ಶ್ರುತಿ.

ಯೂಟ್ಯೂಬ್ ವಾಹಿನಿಯೊಂದರ ಜೊತೆ ಮಾತನಾಡಿರುವ ಶ್ರುತಿ, ತಮ್ಮ ಬದುಕಿನ ಬಗ್ಗೆ ಅನೇಕ ವಿಚಾರಗಳನ್ನು ಮಾತನಾಡಿದ್ದಾರೆ. ಅದರಲ್ಲೂ ಕುಡಿತದ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೇ ಹೇಳಿಕೊಂಡಿದ್ದರು. ಜೊತೆಗೆ ಇನ್ನಷ್ಟೇ ರಿಲೀಸ್ ಆಗಬೇಕಿರುವ ಸಲಾರ್ ಸಿನಿಮಾದ ಬಗ್ಗೆಯೂ ಶ್ರುತಿ ಮಾತನಾಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *