ನಾನು ಪಕ್ಷಕ್ಕೂ, ಯದುವೀರ್ ಅವರಿಗೂ ದ್ರೋಹ ಮಾಡಲ್ಲ-ಸಂಸದ ಪ್ರತಾಪ್ ಸಿಂಹ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್
kannada t-shirts

ಮೈಸೂರು,ಮಾರ್ಚ್,18,2024(www.justkannada.in): ಪಕ್ಷವು ಯದುವೀರ್  ಅವರನ್ನು ಮೈಸೂರು-ಕೊಡಗು ಅಭ್ಯರ್ಥಿಯಾಗಿ ಮಾಡಿದೆ. ನಾನು ಪಕ್ಷಕ್ಕೂ, ಯದುವೀರ್ ಅವರಿಗೂ ದ್ರೋಹ ಮಾಡಲ್ಲ ಎಂದು ಹಾಲಿ ಸಂಸದ ಪ್ರತಾಪ್ ಸಿಂಹ ತಿಳಿಸಿದರು.

ಮೈಸೂರಿನಲ್ಲಿ ನಡೆದ ಬಿಜೆಪಿ ಸಂವಾದದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಾವು ನಾಮಪತ್ರ ಸಲ್ಲಿಕೆಗೆ ತಯಾರಿ ಮಾಡಿಕೊಳ್ಳುತ್ತಿದ್ದೇವೆ. ಯದುವೀರ್ ರಾಜರಾಗಿ ನಾಡಿಗೆ ಪರಿಚಯ ಆಗಿದ್ದರೂ ಅಭ್ಯರ್ಥಿಯಾಗಿ ಮನವರಿಕೆ ಮಾಡಿಕೊಡಬೇಕು. ಇದು ತುಂಬಾ ದೊಡ್ಡ ಕ್ಷೇತ್ರ. ಕಡಕೊಳದಿಂದ ಕರ್ಕಿ 200 ಕಿ.ಮೀ. ಹೋಗಬೇಕು.  ಜನರನ್ನು ತಲುಪಲು ಮಾಧ್ಯಮ ಮಾಖ್ಯ ಎಂದರು.

ನಾನು ಪಕ್ಷಕ್ಕೂ ದ್ರೋಹ ಮಾಡಲ್ಲ, ಪಕ್ಕದಲ್ಲಿರುವವರಿಗೂ ದ್ರೋಹ‌ ಮಾಡಲ್ಲ. 2014 ರಲ್ಲಿ ನನಗೆ ಯಾಕೆ ಟಿಕೆಟ್ ಕೊಟ್ಟರು ಅಂತಾ  ಹೈಕಮಂಡ್ ಹೇಳಿರಲಿಲ್ಲ. ನಾನು ಯಾಕೆ ಕೊಟ್ಟರಿ ಅಂತಾ ಕೇಳಿರಲಿಲ್ಲ. ಈಗಲೂ ಅಷ್ಟೇ ಯಾಕೆ ಟಿಕೆಟ್ ತಪ್ಪಿಸಿದ್ದೀರಿ ಅಂತಾ ನಾನು ಕೇಳಿಯೂ ಇಲ್ಲ. ಅವರು ಹೇಳಿಯೂ ಇಲ್ಲ ಎಂದು ಪ್ರತಾಪ್ ಸಿಂಹ ಹೇಳಿದರು.

ಕಾಂಗ್ರೆಸ್ ಪಕ್ಷದಿಂದ ಆಫರ್ ಇತ್ತು ಇಲ್ವಾ ಎಂಬ ಯಾವ ಪ್ರಶ್ನೆಗಳು ಈಗ ಪ್ರಸ್ತುತ ಅಲ್ಲ. ನಮಗೆ ಯದುವೀರ್ ಅವರನ್ನು ಗೆಲ್ಲಿಸುವುದಷ್ಟೇ ಈಗ ಮುಖ್ಯ. ದೇಶಕ್ಕೆ ಮೋದಿ ಬೇಕು, ಮೋದಿ ಪರವಾಗಿ ಕೈ ಎತ್ತಲು ಮೈಸೂರಿನಿಂದ ಒಬ್ಬ ವ್ಯಕ್ತಿ ಬೇಕು ಇದಷ್ಟೇ ನಮಗೆ ಮುಖ್ಯ. ಪಕ್ಷ ನನಗೆ ತಾಯಿ ಇದ್ದಾಗೆ. ಇದು ಬರಿ ಬಾಯಿ ಮಾತಲ್ಲ. ಇದು ನನ್ನ ಮನಸಿನ ಮಾತು ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

Key words:  lokasabha election-BJP candidate-Yaduveer- MP Pratap Simha-mysore

website developers in mysore


Previous articleಮೈಸೂರಿನಲ್ಲಿ ಟಿಂಬರ್ ಮಳಿಗೆಗೆ ಆಕಸ್ಮಿಕ ಬೆಂಕಿ.


Font Awesome Icons

Leave a Reply

Your email address will not be published. Required fields are marked *