ನಾಲ್ವರು ಆರೋಪಿಗಳ ಬಂಧನ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಬೆಳಗಾವಿ:  ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಅತ್ಯಾಪ್ತ ಅಣ್ಣಪ್ಪ ನಿಂಬಾಳ ಹತ್ಯೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಾಂಡೆಗಾಂವ ಗ್ರಾಮದ ವಿಠಲ ಶ್ರವಣಕುಮಾರ ಪೂಜೇರಿ (30), ಶಿರೂರು ಗ್ರಾಮದ ಶಿವಾಜಿ ಲಹು ಹಜಾರೆ (26), ಸುಖದೇವ ರಘುನಾಥ ಹಜಾರೆ (26) ಮತ್ತು ಸಂತೋಷ ಅವಜಿ ಹೊನಮೋರೆ (24) ಬಂಧಿತರು.

ಏಪ್ರೀಲ್‌ 3 ರಂದು ತಡರಾತ್ರಿ ಖೀಳೆಗಾಂವ್‌ ಗ್ರಾಮದ ಹೊರವಲಯದಲ್ಲಿ ಅಣ್ಣಪ್ಪ ಬಸಪ್ಪ ನಿಂಬಾಳ(58) ಅವರ ಮೇಲೆ ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ತೀವ್ರವಾಗಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನಪ್ಪಿದ್ದರು. 20 ಗುಂಟೆ ಜಮೀನು ಸಂಬಂಧ ಇವರು ಪ್ರಭಾವಿ ಕಾಂಗ್ರೆಸ್ ಮುಖಂಡನನ್ನು ಹತ್ಯೆ ಮಾಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ. 5 ದಿನದ ಕಾರ್ಯಚರಣೆ ನಂತರ ನಾಲ್ವರು ದುಷ್ಕರ್ಮಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇದೀಗೆ ತನಿಖೆ ನಡೆಸುತಿದ್ದಾರೆ ಎನ್ನಲಾಗಿದೆ.

Font Awesome Icons

Leave a Reply

Your email address will not be published. Required fields are marked *