ನಾಳೆ ಆರ್​​​ಸಿಬಿ, ರಾಜಸ್ತಾನ್ ನಡುವಿನ ಐಪಿಎಲ್​ ಪಂದ್ಯ ರದ್ದು?

ಜೈಪುರ: ನಾಳೆ ಜೈಪುರ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ತಾನ್​ ರಾಯಲ್ಸ್​ ಮಧ್ಯೆ ಹೈವೋಲ್ಟೇಜ್​ ಪಂದ್ಯ ನಡೆಯಲಿದೆ.

ಆರ್‌ಸಿಬಿ ಇದುವರೆಗೂ ಪ್ರದರ್ಶನದಲ್ಲಿ ಸ್ಥಿರತೆ ತೋರಿಲ್ಲ. 4 ಪಂದ್ಯಗಳಲ್ಲಿ ಕೇವಲ 2 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ವಿರುದ್ಧ ಹೀನಾಯ ಸೋಲು ಕಂಡಿತ್ತು. ಇದರಿಂದ ನೆಟ್ ರನ್ ರೇಟ್ ಕೂಡ ಹದಗೆಟ್ಟಿದೆ.

ಇನ್ನು, ಆರ್​ಸಿಬಿ ಮತ್ತು ರಾಜಸ್ತಾನ್​ ನಡುವಿನ ಪಂದ್ಯದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ರಾತ್ರಿ ಮ್ಯಾಚ್​​ ನಡೆಯೋ ಕಾರಣ ಹನಿ ಮಳೆಯಾಗೋ ಸಾಧ್ಯತೆ ಇದೆ. ರಾತ್ರಿ 7 ಗಂಟೆಯಿಂದ 9ರ ನಡುವೆ ಮಳೆ ಬರುವ ಸಾಧ್ಯತೆ ಇದ್ದು, ಪಂದ್ಯ ರದ್ದು ಕೂಡ ಆಗಬಹುದು ಎಂದು ಹೇಳಲಾಗ್ತಿದೆ.

Font Awesome Icons

Leave a Reply

Your email address will not be published. Required fields are marked *