ನಾಳೆ ತೆರೆಕಾಣಲಿದೆ ‘ಫೈಟರ್’ ಸಿನಿಮಾ: ಗಲ್ಫ್​ ದೇಶಗಳಲ್ಲಿ ನಿಷೇಧ

ಮುಂಬೈ : ಹೃತಿಕ್ ರೋಷನ್  ದೀಪಿಕಾ ಪಡುಕೋಣೆ ನಟಿಸಿರುವ ‘ಫೈಟರ್’ ಸಿನಿಮಾ ನಾಳೆ (ಜನವರಿ 25) ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದ್ದು,ಈ ಸಿನಿಮಾ ಸಹ ಬಾಲಿವುಡ್​ನ ಮತ್ತೊಂದು ಬ್ಲಾಕ್ ಬಸ್ಟರ್ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದರ ಬೆನ್ನಲ್ಲೆ ಚಿತ್ರತಂಡಕ್ಕೆ ದೊಡ್ಡ ಹಿನ್ನಡೆಯೊಂದು ಎದುರಾಗಿದೆ. ಸಿನಿಮಾದ ಮೇಲೆ ಗಲ್ಫ್ ದೇಶಗಳಲ್ಲಿ ನಿಷೇಧ ಹೇರಲಾಗಿದೆ.

ಗಲ್ಫ್ ದೇಶಗಳಾದ ಬಹ್ರೇನ್, ಕುವೈತ್, ಒಮಾನ್, ಖತಾರ್, ಸೌದಿ ಅರೆಬಿಯಾಗಳಲ್ಲಿ ‘ಫೈಟರ್’ ಸಿನಿಮಾದ ಪ್ರದರ್ಶಕ್ಕೆ ನಿಷೇಧ ಹೇರಲಾಗಿದೆ. ಆದರೆ ಭಾರತೀಯರು ಹೆಚ್ಚಿಗಿರುವ ಯುಎಇನಲ್ಲಿ ಪಿಜಿ15 ಪ್ರಮಾಣಪತ್ರದೊಂದಿಗೆ ಸಿನಿಮಾದ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

‘ಫೈಟರ್’ ಸಿನಿಮಾವನ್ನು ಗಲ್ಫ್​ ದೇಶಗಳಲ್ಲಿ ನಿಷೇಧಿಸಲಾಗಿದೆ. ಆದರೆ ಯುಎಇ ನಲ್ಲಿ ಮಾತ್ರವೇ ಕೆಲವು ಷರತ್ತುಗಳೊಂದಿಗೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಿನಿಮಾ ನಿಷೇಧಕ್ಕೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ.

ಆಕ್ಷನ್ ಸಿನಿಮಾಗಳ ನಿರ್ದೇಶಕ ಸಿದ್ಧಾರ್ಥ್ ಆನಂದ್ ಈ ಸಿನಿಮಾ ನಿರ್ದೇಶನ ಮಾಡಿದ್ದು, ಸಿನಿಮಾದ ಟ್ರೈಲರ್​ ಸಖತ್ ಗಮನ ಸೆಳೆದಿದೆ.

ಫೈಟರ್  ‘ಫೈಟರ್’ ಸಿನಿಮಾ ಭಾರತೀಯ ವಾಯುಸೇನೆಯ ಶೌರ್ಯ, ಸಾಹಸ ಸಾರುವ ಕತೆ ಒಳಗೊಂಡಿದೆ. ಈ ಸಿನಿಮಾದಲ್ಲಿ ಪಾಕಿಸ್ತಾನಿ ಸೈನ್ಯವನ್ನು, ಅಲ್ಲಿನ ರಾಜಕಾರಣಿಗಳನ್ನು ಖಳರಂತೆ ತೋರಿಸಲಾಗಿದೆ. ಪಾಕಿಸ್ತಾನದೊಟ್ಟಿಗೆ ಸೌಹಾರ್ಧ ಸಂಬಂಧವನ್ನು ಬಹುತೇಕ ಗಲ್ಫ್​ ರಾಷ್ಟ್ರಗಳು ಹೊಂದಿರುವ ಕಾರಣದಿಂದ ಹಾಗೂ ಎರಡು ನೆರೆ ರಾಷ್ಟ್ರಗಳ ನಡುವೆ ದ್ವೇಷ ಉಂಟು ಮಾಡುವ ಕತೆಯನ್ನು ಒಳಗೊಂಡಿರುವ ಕಾರಣಕ್ಕೆ ಸಿನಿಮಾವನ್ನು ನಿಷೇಧಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Font Awesome Icons

Leave a Reply

Your email address will not be published. Required fields are marked *