ರಾಯಚೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕರಡಕಲ್ಲನಲ್ಲಿ ನಿಧಿ ಆಸೆಗೆ ದೇವರ ಮೂರ್ತಿ ಭಗ್ನಗೊಳಿಸಿದ ಘಟನೆ ನಡೆದಿದೆ.
ಬಿಲ್ಲಮರಾಜನ ಬೆಟ್ಟದ ಕೆಳಭಾಗದ ಗುರುಲಿಂಗೇಶ್ವರ ಕರ್ತೃ ಗದ್ದುಗೆಯ ಈಶ್ವರ ಲಿಂಗ ಮತ್ತು ಬಸವ ಮೂರ್ತಿಗಳು ಭಗ್ನಗೊಂಡಿವೆ. ಈಶ್ವರ ಮೂರ್ತಿಯ ಮೇಲ್ಭಾಗಕ್ಕೆ ಹಾನಿಯಾಗಿದೆ. ಬಸವ ಮೂರ್ತಿಯ ಕುತ್ತಿಗೆಯನ್ನು ಕತ್ತರಿಸಿದ್ದಾರೆ.
ಗದ್ದುಗೆ ಹಿಂಭಾಗದಲ್ಲಿ ಆಳವಾದ ಗುಂಡಿಯನ್ನೂ ಅಗೆಯಲಾಗಿದೆ. ನಿಧಿಗಳ್ಳರ ಹಾವಳಿಗೆ ಐತಿಹಾಸಿಕ ಸ್ಥಳ, ದೇವರ ಮೂರ್ತಿ ನೆಲಸಮ ಆಗುತ್ತಿರೋದಕ್ಕೆ ಸ್ಥಳೀಯಕರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣದ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.