ನಿರ್ಮಲಾ ಸೀತಾರಾಮನ್‌ ವಜಾಗೊಳಿಸಿ ಎಂದು ರಾಷ್ಟ್ರಪತಿಗೆ ಪತ್ರ ಬರೆದ ಐಆರ್‌ಎಸ್‌ ಅಧಿಕಾರಿ

ಚೆನ್ನೈ:   ಬಡ ರೈತರಿಗೆ ಸಮನ್ಸ್ ನೀಡಿರುವ ವಿಚಾರವಾಗಿ ನಿರ್ಮಲಾ ಸೀತಾರಾಮನ್ ಅವರನ್ನು ವಜಾಗೊಳಿಸಬೇಕೆಂದು ತಮಿಳುನಾಡು ಐಆರ್‌ಎಸ್ ಅಧಿಕಾರಿ ಬಿ ಬಾಲಮುರುಗನ್ ಎಂಬವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿದ್ದಾರೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜಾರಿ ನಿರ್ದೇಶನಾಲಯವನ್ನು ಬಿಜೆಪಿಯ ವಿಸ್ತೃತ ಅಂಗವಾಗಿ ಪರಿವರ್ತಿಸಿದ್ದಾರೆ. ತಮಿಳುನಾಡಿನ ಸೇಲಂನಲ್ಲಿನ ರೈತರಿಗೆ PMLA ಕಾಯಿದೆಯಡಿ (ಹಣ ಲಾಂಡರಿಂಗ್ ತಡೆ ಕಾಯಿದೆ, 2002) ಇಡಿ ಸಮನ್ಸ್ ಕಳುಹಿಸಿದ್ದಾರೆ.

ಜಮೀನು ಸಮಸ್ಯೆಗಳಿಂದಾಗಿ ರೈತರು ಕಳೆದ ನಾಲ್ಕು ವರ್ಷಗಳಿಂದ ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ಸಾಧ್ಯವಾಗುತ್ತಿಲ್ಲ ಅವರ ಬ್ಯಾಂಕ್ ಖಾತೆಯಲ್ಲಿ ಕೇವಲ 450 ರೂ ಇತ್ತು, ಅವರು ವೃದ್ಧಾಪ್ಯ ಪಿಂಚಣಿ ರೂ. 1000 ಪಡೆಯುತ್ತಿದ್ದಾರೆ. ಅವರ ಜೀವನೋಪಾಯಕ್ಕಾಗಿ ಸರ್ಕಾರ ಒದಗಿಸಿದ ಉಚಿತ ಪಡಿತರವನ್ನು ಆಶ್ರಯಿಸಿದ್ದಾರೆ ಎಂದು ಪತ್ರದಲ್ಲಿ ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *