ನೀವು ಹೀಗೂ ಮಾಡಬಹುದು ಮಶ್ರೂಮ್ ಬಜ್ಜಿ…

ಮಶ್ರೂಮ್ ನಿಂದ ಹಲವು ರೀತಿಯ ಖಾದ್ಯಗಳನ್ನು ತಯಾರಿಸಬಹುದಾಗಿದ್ದು, ಅದರಲ್ಲಿ ಬಜ್ಜಿಯೂ ಒಂದಾಗಿದ್ದು, ಇದನ್ನು ಬಿಸಿ ಬಿಸಿಯಾಗಿದ್ದಲೇ ಕಾಫಿ ಜತೆಗೆ ಸೇವಿಸೋದು ಮಜಾ ಇರುತ್ತದೆ. ಈ ಬಜ್ಜಿಯನ್ನು ಸುಲಭವಾಗಿ ಮಾಡುವುದು ಹೇಗೆ ಎಂಬುದು ಇಲ್ಲಿದೆ.

ಬೇಕಾಗುವ ಪದಾರ್ಥಗಳು: ದುಂಡು ಅಣಬೆ- 200ಗ್ರಾಂ, ಕಡಲೆಹಿಟ್ಟು- ಅರ್ಧ ಬಟ್ಟಲು, ಉಪ್ಪು- ರುಚಿಗೆ ತಕ್ಷಷ್ಟು, ಖಾರದಪುಡಿ- ಒಂದು ಚಮಚ, ಜೀರಿಗೆಪುಡಿ- ಅರ್ಧ ಚಮಚ, ಅಡುಗೆಸೋಡಾ- ಚಿಟಿಕೆಯಷ್ಟು, ಎಣ್ಣೆ- ಕರಿಯಲು ಅಗತ್ಯವಿರುವಷ್ಟು.

ಮಾಡುವ ವಿಧಾನ: ಮಶ್ರೂಮ್ ನ್ನು ಶುಚಿ ಮಾಡಿಕೊಂಡು ಅದನ್ನು ಅಡ್ಡವಾಗಿ ಸೀಳಿ ಎರಡು ಭಾಗ ಮಾಡಿಕೊಳ್ಳಬೇಕು. ಇನ್ನೊಂದು ಅಗಲವಾದ ಪಾತ್ರೆ ತೆಗೆದುಕೊಂಡು ಅದರಲ್ಲಿ ಕಡಲೆಹಿಟ್ಟು ಹಾಕಿ ಅದಕ್ಕೆ ಉಪ್ಪು, ಖಾರದಪುಡಿ, ಜೀರಿಗೆಪುಡಿ ಸೋಡಾ ಅಗತ್ಯ ನೀರು ಹಾಕಿ ಬಜ್ಜಿ ಹಿಟ್ಟಿನ ಹದಕ್ಕೆ ಹಿಟ್ಟು ತಯಾರಿಸಿಕೊಳ್ಳಬೇಕು. ಆ ನಂತರ ಬಾಣಲೆಯಲ್ಲಿ ಎಣ್ಣೆಯಿಟ್ಟು ಅದು ಕಾದ ಬಳಿಕ ಮಶ್ರೂಮ್‌ನ್ನು ಕಡಲೆ ಹಿಟ್ಟಿನಲ್ಲಿ ಅದ್ದಿ ಎಣ್ಣೆಗೆ ಹಾಕಿ ಚೆನ್ನಾಗಿ ಕಂದು ಬರುವ ತನಕ ಕರಿದು ತೆಗೆದರೆ ಮಶ್ರೂಮ್ ಬಜ್ಜಿ ರೆಡಿ.

Font Awesome Icons

Leave a Reply

Your email address will not be published. Required fields are marked *