ನ್ಯೂಸ್‌ ಕರ್ನಾಟಕದ ವತಿಯಿಂದ ವಿಶೇಷ ಚೇತನ ಮಕ್ಕಳಿಗಾಗಿ ಕ್ರಿಸ್ಮಸ್ ಮತ್ತು ‌ನ್ಯೂಇಯರ್‌ ಆಯೋಜನೆ

ಮಂಗಳೂರು: ನ್ಯೂಸ್ ಕರ್ನಾಟಕ, ಫಿಝ್ಹಾ ಬೈ ನೆಕ್ಸಸ್ ಮಾಲ್‌ ಮತ್ತು ಸ್ಪೆಷಲ್ ಪೇರೆಂಟ್ಸ್ ಸಪೋರ್ಟ್ ಗ್ರೂಪ್ ಸಹಯೋಗದೊಂದಿಗೆ ಡಿಸೆಂಬರ್ 30 ರಂದು ಫಿಝ್ಹಾ ಬೈ ನೆಕ್ಸಸ್ ಮಾಲ್‌ನಲ್ಲಿ ವಿಶೇಷ ಚೇತನ ಮಕ್ಕಳಿಗಾಗಿ ಕ್ರಿಸ್ ಮಸ್ ಮತ್ತು ಹೊಸ ವರ್ಷದ ಆಚರಣೆಯನ್ನು ನ್ಯೂಸ್‌ ಕರ್ನಾಟಕ ಆಯೋಜಿಸಿದೆ. ಸಂಜೆ 4:30 ರಿಂದ 7ಗಂಟೆ ವರೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಉಚಿತ ನೋಂದಾವಣೆ ಕಡ್ಡಾಯವಾಗಿದೆ.

ಈ ವಿಶೇಷ ಕಾರ್ಯಕ್ರಮದಲ್ಲಿ ಗೇಮ್ಸ್‌, ಕರೋಲ್‌ ಸಿಂಗಿಂಗ್‌ , ಮನರಂಜನೆ ಆಟಗಳು ನಡೆಯಲಿದೆ. ಹಾಗು ಆತ್ಯಾಕರ್ಷಕ ಉಡುಗೊರೆಗಳು ಸಿಗಲಿದೆ. ಇನ್ನು ಮುಖ್ಯವಾಗಿ ಈ ವಿಶೇಷ ಕಾರ್ಯಕ್ರಮಕ್ಕೆ ಬರುವವರು ಕೆಂಪು ಬಣ್ಣದ ಉಡುಗೆ ತೊಟ್ಟು ಬರಬೇಕು.

ಹೆಚ್ಚಿನ ಮಾಹಿತಿಗಾಗಿ ಮೀನಾ ನೋರೊಹ್ನ 8762363852 ಹಾಗು ಪ್ರತಿಮಾ ಪಾವರ್‌ 7676218092 ಸಂಪರ್ಕಿಸಬಹುದು

Font Awesome Icons

Leave a Reply

Your email address will not be published. Required fields are marked *