ನ್ಯೂಸ್‌ ಕರ್ನಾಟಕ ಮತ್ತು ಮಾಂಡೋವಿ ಮೋಟರ್ಸ್‌ ಸಹಯೋಗದೊಂದಿಗೆ ಮಕ್ಕಳಿಗಾಗಿ ಶ್ರೀರಾಮ ವೇಷ ಸ್ಪರ್ಧೆ

ಮಂಗಳೂರು: ನ್ಯೂಸ್‌ ಕರ್ನಾಟಕ ಮತ್ತು ಮಾಂಡೋವಿ ಮೋಟರ್ಸ್‌ ಇದರ ಸಹಯೋಗದೊಂದಿಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಮಕ್ಕಳಿಗಾಗಿ ಶ್ರೀರಾಮ ವೇಷ ಸ್ಪರ್ಧೆಯನ್ನು ಅಯೋಜಿಸಲಾಗಿದೆ.

ಇದೇ ಜನವರಿ 20ರಂದು ಮಧ್ಯಾಹ್ನ 3 ಗಂಟೆಗೆ ಈ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಮಾಂಡೋವಿ ಮೋಟರ್ಸ್‌ ಬಲ್ಮಠ ಮಂಗಳೂರು ಇಲ್ಲಿ ನಡೆಯಲಿದೆ.

ಇನ್ನು ಈ ಸ್ಪರ್ಧೆಯಲ್ಲಿ 1 ರಿಂದ 11 ವರ್ಷದ ಮಕ್ಕಳಿಗೆ ಅವಕಾಶವಿದೆ. 1 ರಿಂದ 3 ವರ್ಷದ ಮಕ್ಕಳಿಗೆ ಶ್ರೀರಾಮನ ವೇಷ., 4 ರಿಂದ 7 ವರ್ಷದ ಮಕ್ಕಳಿಗೆ 2 ನಿಮಿಷ ಶ್ರೀರಾಮನ ಕುರಿತಾದ ಮಾತುಗಾರಿಕೆಗೆ ಅವಕಾಶ., 8 ರಿಂದ 11 ವರ್ಷದ ಮಕ್ಕಳಿಗೆ 2 ನಿಮಿಷದ ಶ್ರೀರಾಮನ ಶ್ಲೋಕ ಪಠಣೆಗೆ ಅವಕಾಶ ಇರಲಿದೆ. ಹಾಗು ಇಲ್ಲಿ ತೀರ್ಪುಗಾರರ ತೀರ್ಮಾನ ಅಂತಿಮವಾಗಿರುತ್ತದೆ. ಮುಖ್ಯವಾಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವ ಮಕ್ಕಳು ಕಡ್ಡಾಯವಾಗಿ ನೊಂದಾಣಿ ಮಾಡತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಪ್ರತಿಮಾ ಪವಾರ್‌ +7676218092 ಸಂಪರ್ಕಿಸಿ.

Font Awesome Icons

Leave a Reply

Your email address will not be published. Required fields are marked *