ಪಂತ್​ಗೂ ಕೋಟಿ ದೋಖಾ; ಐಪಿಎಲ್‌ ನಲ್ಲಿ ಮುಂಬೈ ತಂಡ ಪ್ರತಿನಿಧಿಸಿದ್ದ ಆಟಗಾರ ಅರೆಸ್ಟ್

ಮುಂಬೈ: ಮಾಜಿ ಅಂಡರ್​ 19 ಆಟಗಾರ ಮತ್ತು ಐಪಿಎಲ್​ನಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದ ಮೃಣಾಂಕ್​ ಸಿಂಗ್​ ಎಂಬ ಕ್ರಿಕೆಟಿಗನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 25 ವರ್ಷದ ಮಾಜಿ ಕ್ರಿಕೆಟಿಗ ತಾಜ್​ ಪ್ಯಾಲೇಸ್​ ಸೇರಿದಂತೆ ಐಷಾರಾಮಿ ಹೋಟೆಲ್​​ಗಳಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರೆಸ್ಟ್​ ಮಾಡಲಾಗಿದೆ.

ಮೃಣಾಂಕ್​ ಸಿಂಗ್ ಜುಲೈ 2022ರಲ್ಲಿ ತಾಜ್ ಪ್ಯಾಲೇಸ್​​ಗೆ 5.5 ಲಕ್ಷ ರೂಪಾಯಿ ವಂಚಿಸಿದ್ದನು. ಟೀಂ ಇಂಡಿಯಾದ ಆಟಗಾರ ರಿಷಬ್​ ಪಂತ್​ಗೂ ಕೂಡ 2020 ಮತ್ತು 2021ರಲ್ಲಿ 1.63 ಕೋಟಿ ವಂಚಿಸಿರುವ ಪ್ರಕರಣ ಆತನ ಮೇಲಿದೆ.

ಮೃಣಾಂಕ್​ ಸಿಂಗ್ ಹರ್ಯಾಣ ಅಂಡರ್​ 19 ತಂಡ ಮತ್ತು ಮುಂಬೈ ಇಂಡಿಯನ್ಸ್​ ತಂಡವನ್ನು ಪ್ರತಿನಿಧಿಸಿದ್ದನು. ಆದರೀಗ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಇದಲ್ಲದೆ, ಮೃಣಾಂಕ್​ ಸಿಂಗ್ ಐಜಿಐ ಏರ್​ಪೋರ್ಟ್​​ನಲ್ಲಿ ತಾನೋಬ್ಬ ಐಪಿಎಸ್​ ಅಧಿಕಾರಿ ಎಂಬ ರೀತಿಯಲ್ಲಿ ವಂಚಿಸಿದ್ದಾನೆ ಎಂದು ಕರ್ನಾಟಕದ ಎಡಿಜಿಪಿ ಅಲೋಕ್​ ಕುಮಾರ್​ ತಿಳಿಸಿದ್ದಾರೆ.

 

Font Awesome Icons

Leave a Reply

Your email address will not be published. Required fields are marked *