ಪತ್ನಿ, ಮಗಳು, ಮೊಮ್ಮಕ್ಕಳೊಂದಿಗೆ ರಸ್ತೆಗೆ ಬಂದ‌ ನಾರಾಯಣಮೂರ್ತಿ: ವಿಡಿಯೋ ವೈರಲ್

ಬೆಂಗಳೂರು: ಇನ್ಫೋಸಿಸ್‌ ನಾರಾಯಣ ಮೂರ್ತಿ ಅವರು ಪತ್ನಿ ಸುಧಾ ಮೂರ್ತಿ, ಮಗಳು ಅಕ್ಷತಾ ಮೂರ್ತಿ ಮತ್ತು ಮೊಮ್ಮಕ್ಕಳ ಜೊತೆ ಯಾವುದೇ ಭದ್ರತೆಯಿಲ್ಲದೆ ಬೆಂಗಳೂರಿನ ರಸ್ತೆ ಬದಿಯಲ್ಲಿ ಅಡ್ಡಾಡುತ್ತಿರುವ ವಿಡಿಯೋವೊಂದು ಭಾರೀ ವೈರಲ್‌ ಆಗುತ್ತಿದೆ.

ಹೌದು. . ಇವರು ಬೆಂಗಳೂರಿನ ರಸ್ತೆ ಬದಿಯ ಸ್ಟಾಲ್‌ನಲ್ಲಿ ಪುಸ್ತಕಗಳನ್ನು ಪರಿಶೀಲಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ಯುಕೆ ಪ್ರಧಾನಿ ರಿಷಿ ಸುನಕ್ ಮತ್ತು ಅಕ್ಷಯ ಮೂರ್ತಿ ಅವರ ಪುತ್ರಿಯರಾದ ಅನುಷ್ಕಾ ಮತ್ತು ಕೃಷ್ಣ ಅವರ ಮೊಮ್ಮಗಳು ಸಹ ಈ ವೀಡಿಯೊದಲ್ಲಿ ಕಂಡುಬಂದಿದ್ದು, ಇದೀಗ ಈ ವಿಡಿಯೋ ಭಾರೀ ವೈರಲ್‌ ಆಗುತ್ತಿದೆ.

ಈ ವಿಡಿಯೋವನ್ನು ಎಂಆರ್‌ ಗುರುಪ್ರಸಾದ್‌ ಎನ್ನುವರು ತಮ್ಮ ಟ್ವೀಟ್‌ ಖಾರೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ತಮ್ಮ ಅನಿಸಿಕೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ. “ಯುಕೆ ಪ್ರಧಾನು ರಿಷಿ ಸುನಕ್ ಅವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿನ ರಾಘವೇಂದ್ರ ಮಠದಲ್ಲಿ ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಯಾವುದೇ ಭದ್ರತೆಯಿಲ್ಲದೆ ಬೆಂಗಳೂರಿನಲ್ಲಿ ಸುತ್ತಾಡಿರುವ ಈ ದೃಶ್ಯವೇ ಅವರ ಸರಳತೆಗೆ ಸಾಕ್ಷಿ,” ಎಂದು ಬರೆದುಕೊಂಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *