ಪರಿಷತ್ ಸದಸ್ಯರಾಗಿ ಉಮಾಶ್ರೀ, ಸುಧಾಮ್ ದಾಸ್, ಎಂ.ಆರ್.ಸೀತಾರಾಮ್ ಪ್ರಮಾಣ ವಚನ ಸ್ವೀಕಾರ – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್Promotion

ಬೆಂಗಳೂರು, ಆಗಸ್ಟ್ 31, 2023 (www.justkannada.in): ವಿಧಾನ ಪರಿಷತ್‌ಗೆ ನಾಮನಿರ್ದೇಶನಗೊಂಡಿರುವ ಹಿರಿಯ ನಟಿ, ಮಾಜಿ ಸಚಿವೆ ಉಮಾಶ್ರೀ, ಜಾರಿ ನಿರ್ದೇಶನಾಲಯದ ಮಾಜಿ ಅಧಿಕಾರಿ ಸುಧಾಮ್ ದಾಸ್, ಮಾಜಿ ಸಚಿವ ಎಂ.ಆರ್.ಸೀತಾರಾಮ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಭಾಪತಿಯವರು ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಿರಿಯ ಸಚಿವರು ಉಪಸ್ಥಿತರಿರಲಿದ್ದಾರೆ. 2023ರ ಮೇ 17ರಂದು ಮೋಹನ್ ಕೊಂಡಜ್ಜಿ ಹಾಗೂ ಪಿ.ಆರ್ ರಮೇಶ್ ನಾಮನಿರ್ದೇಶನ ಅವಧಿ ಮುಕ್ತಾಯವಾಗಿತ್ತು. ಜೂನ್ 8ರಂದು ಸಿ.ಎಂ.ಲಿಂಗಪ್ಪ ಸದಸ್ಯತ್ವ ಅವಧಿ ಮುಕ್ತಾಯವಾಗಿತ್ತು.

ಈ ಮೂರು ಸ್ಥಾನಕ್ಕೆ 20ಕ್ಕಿಂತ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದರು. ಅಂತಿಮವಾಗಿ ಉಮಾಶ್ರೀ, ಸುಧಾಮ್ ದಾಸ್, ಎಂ.ಆರ್.ಸೀತಾರಾಮ್ ಹೆಸರು ಅಂತಿಮಗೊಂಡಿತ್ತು.  2024ರ ಅಕ್ಟೋಬರ್‌ನಲ್ಲಿ ಮತ್ತೆರೆಡು ನಾಮನಿರ್ದೇಶನ ಸ್ಥಾನ ಖಾಲಿಯಾಗಲಿದೆ.


Previous articleಐಸಿಸಿ ಏಕದಿನ ವಿಶ್ವಕಪ್: ಇಂದು ಟೀಂ ಇಂಡಿಯಾ ಪಂದ್ಯಗಳ ಟಿಕೆಟ್ ಮಾರಾಟ


Font Awesome Icons

Leave a Reply

Your email address will not be published. Required fields are marked *