ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೆ ಕಾನೂನು ಕ್ರಮ ಆಗುತ್ತದೆ: ಡಾ.ಪರಮೇಶ್ವರ್

ಬೆಂಗಳೂರು: ನಿನ್ನೆ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎನ್ನಲಾಗಿರುವ ವಿಚಾರಕ್ಕೆ ಸಂಬಂಧಿಸಿ ಗೃಹ ಸಚಿವ ಡಾ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ಘಟನೆ ಸಂಬಂಧ ಒಬ್ಬೊಬ್ಬರು ಒಂದೊಂದು ರೀತಿ ಹೇಳುತ್ತಿದ್ದಾರೆ. ಆ ವಿಡಿಯೋ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಪೊಲೀಸರ ಮಾಡಿರೋ ಚಿತ್ರೀಕರಣ, ವಿಧಾನಸೌಧ ಸಿಸಿ ಕ್ಯಾಮರಾ ಎಲ್ಲವನ್ನೂ ಪಡೆದು ತನಿಖೆ ಮಾಡ್ತೇವೆ. ಕೆಲವರು ನಾಸಿರ್ ಸಾಬ್ ಅಂತಾರೆ, ಕೆಲವರು ಪಾಕಿಸ್ತಾನ ಅಂತಾರೆ. ಇದರ ಸತ್ಯಾಸತ್ಯತೆ ವೈಜ್ಞಾನಿಕವಾಗಿ ತಿಳಿಯಬೇಕು ಎಂದು ಎಫ್ಎಸ್​ಎಲ್​ಗೆ ಕಳುಹಿಸುತ್ತಿದ್ದೇವೆ. ಒಂದು ವೇಳೆ ಕೂಗಿದ್ರೆ ಕಾನೂನು ಕ್ರಮ ಆಗಿಯೇ ಆಗುತ್ತದೆ ಎಂದು ತಿಳಿಸಿದ್ದಾರೆ.

ಅಧಿಕೃತವಾಗಿ ಟೆಲಿಕಾಸ್ಟ್ ಆಗಿರೋ ಕ್ಲಿಪಿಂಗ್ ಪಡೆದು ತನಿಖೆಗೆ ಒಳಪಡಿಸುತ್ತೇವೆ. ಈಗಾಗಲೇ ಸುಮೋಟೋ ಕೇಸ್ ದಾಖಲಾಗಿದೆ. ಬಿಜೆಪಿ ಕೊಟ್ಟಿರೋ ದೂರನ್ನೂ ಅದಕ್ಕೆ ಸೇರಿಸಿದ್ದೇವೆ. ಯಾರು ಮೊದಲು ಟೆಲಿಕಾಸ್ಟ್ ಮಾಡಿದ್ದಾರೆ, ಅವರ ವಿಡಿಯೋ ಪಡೆದು ತನಿಖೆ ಮಾಡ್ತೇವೆ.

ಎಫ್​ಎಸ್​ಎಲ್ ಕಳುಹಿಸಿವ ಪ್ರಕಿಯೆಗಳು ಆರಂಭವಾಗಿವೆ. ಕೂಗಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

ನಾಸೀರ್ ಹುಸೇನ್ ಪತ್ರಕರ್ತರ ಮೇಲೆನ ವರ್ತನೆ ಆರೋಪಕ್ಕೆ ಪ್ರತಿಕ್ರಿಯಿಸಿ.. ಅವರು ಏನ್ ಹೇಳಿದ್ದಾರೆ ಅಂತ ನೋಡಿಲ್ಲ. ನೋಡಿದ ಆಮೇಲೆ ಹೇಳ್ತೀನಿ ಎಂದರು.

ಸದನ ಒಳಗೆ ಹೊರಗೆ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ.. ಅವರು ಮಾಡಲಿ, ನಾವು ತಪ್ಪು ಅಂತ ಹೇಳಲ್ಲ. ಕಾನೂನು ಚೌಕಟ್ಟಿನಲ್ಲಿ ಮಾಡಲಿ ಎಂದರು.

Font Awesome Icons

Leave a Reply

Your email address will not be published. Required fields are marked *