ಪಾಪ ಮಂಜುನಾಥ್ ರನ್ನು ಹರಕೆ ಕುರಿ ಮಾಡುತ್ತಿದ್ದಾರೆ: ಯಾಕೆ ನಿಮಗೆ ತಾಕತ್ತಿಲ್ವಾ..? ಹೆಚ್.ಡಿಕೆ ವಿರುದ್ದ ‘ಕೈ’ ಶಾಸಕ ಕಿಡಿ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

kannada t-shirts

ರಾಮನಗರ, ಮಾರ್ಚ್​​ 13,2024(www.justkannada.in):  ಬೆಂಗಳೂರು ಗ್ರಾಮಾಂತರದಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.‌ಸಿ.ಎನ್ ಮಂಜುನಾಥ್ ಅವರ  ಸ್ಪರ್ಧೆ ಕುರಿತು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್  ಲೇವಡಿ ಮಾಡಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್,  ಡಾ. ಸಿಎನ್ ‌ಮಂಜುನಾಥ್​ ಅವರು ಒಳ್ಳೆಯ ಡಾಕ್ಟರ್. ಅವರು ರಾಜಕೀಯಕ್ಕೆ ಅಮಾಯಕರು. ಪಾಪ ಅಮಾ.ಯಕರನ್ನು‌ ತಂದು ಸ್ಪರ್ಧೆಗಿಳಿಸುತ್ತಿದ್ದಾರೆ. ಡಿ.ಕೆ ಸುರೇಶ್ ವಿರುದ್ಧ ಮಂಜುನಾಥ್​ರವರನ್ನು ಹರಕೆ ಕುರಿ ಮಾಡುತ್ತಿದ್ದಾರೆ. ಯಾಕೆ ನಿಮಗೆ ತಾಕತ್ತಿಲ್ವಾ, ನಮಗೆ ಗಂಡಸ್ತನ ಇಲ್ವಾ ಎಂದು ಹೆಚ್.ಡಿ ಕುಮಾರಸ್ವಾಮಿ ವಿರುದ್ದ ಕಿಡಿಕಾರಿದ್ದಾರೆ.

ಉಸ್ತುವಾರಿ ಮಂತ್ರಿ ಆಗಿದ್ರಲ್ಲ ಮಾಜಿ ಡಿಸಿಎಂ ಅಶ್ವತ್ಥ್ ನಾರಾಯಣ್ ಅವರನ್ನ ನಿಲ್ಲಿಸಬಹುದಿತ್ತಲ್ವಾ..?  ಡಿಕೆ ಸುರೇಶ್ ವಿರುದ್ಧ ನಿಮಗೆ ಅಭ್ಯರ್ಥಿ ಇಲ್ಲವೆನ್ನುವುದು ತೋರಿಸುತ್ತೆ ಎಂದು  ಲೇವಡಿ ಮಾಡಿದ್ದಾರೆ.

ಜೆಡಿಎಸ್  ಎಲ್ಲಿದೆ..? ಜೆಡಿಎಸ್ ಅವನತಿಯತ್ತ ಸಾಗುತ್ತಿದೆ. ಇರುವ 19 ಜನ ಶಾಸಕರಲ್ಲಿ 10 ರಿಂದ 12‌ ಶಾಸಕರು ಚುನಾವಣೆಗೂ ಮುನ್ನ ಕಾಂಗ್ರೆಸ್ ಬರಲಿದ್ದಾರೆ. ಜೆಡಿಎಸ್​​ನಲ್ಲಿ ಯಾವುದೇ ಸಿದ್ಧಾಂತ ಇಲ್ಲ ಎಂದು ವಾಗ್ದಾಳಿ ನಡೆಸಿದರು.

Key words: CN Manjunath- contest –lokasabha-election-congress –MLA-Iqbal Hussain

website developers in mysore

Font Awesome Icons

Leave a Reply

Your email address will not be published. Required fields are marked *