ಪಾರ್ಲೇ-ಜಿ ಬಿಸ್ಕೆಟ್​​​ನಲ್ಲಿ ಮೂಡಿದ ಅಯೋಧ್ಯೆ: ವಿಡಿಯೋ ವೈರಲ್‌

ಪಶ್ಚಿಮ ಬಂಗಾಳ:  ಅಯೋಧ್ಯೆಯ ಶ್ರೀರಾಮ ಮಂದಿರ ಲೋಕಾರ್ಪಣೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ದೇಶದೆಲ್ಲೆಡೆ ಹಬ್ಬದ ವಾತಾವರಣ ಮನೆ ಮಾಡಿದೆ. ಈ ನಡುವೆ ರಾಮ ಭಕ್ತರು ತಮ್ಮ ಭಕ್ತಿಯನ್ನು ವಿಶಿಷ್ಟ ರೀತಿಯಲ್ಲಿ ತೋರ್ಪಡಿಸುತ್ತಿರುವ ಸುದ್ದಿಗಳು ಹರಿದಾಡುತ್ತಿವೆ.

ಅದೇ ರೀತಿ ಪಶ್ಚಿಮ ಬಂಗಾಳದ ಯವಕನೊಬ್ಬ ಇದೀಗ ಬರೋಬ್ಬರಿ 20 ಕೆ.ಜಿ ಗಳಷ್ಟು ಪಾರ್ಲೆ-ಜಿ ಬಿಸ್ಕೆಟ್ ಬಳಸಿಕೊಂಡು ಅದರಿಂದ ಅದ್ಭುತವಾದ ರಾಮ ಮಂದಿರ ಪ್ರತಿಕೃತಿಯನ್ನು ರಚಿಸಿದ್ದಾರೆ. ಇದರ ವಿಡಿಯೋ ಸಕತ್‌ ವೈರಲ್‌ ಆಗ್ತಿದೆ.

ರಾಮ ಮಂದಿರ ಪ್ರತಿಕೃತಿಯನ್ನು ರಚಿಸಲು ಛೋಟಾನ್ ಘೋಷ್ ಬರೋಬ್ಬರಿ 20 ಕೆ.ಜಿ ಪಾರ್ಲೆ ಜಿ ಬಿಸ್ಕಿಟ್ಗಳನ್ನು ಬಳಸಿದ್ದು, 4-4 ಅಡಿ ಎತ್ತರದ ಈ ರಾಮ ಮಂದಿರ ಪ್ರತಿಕೃತಿಯನ್ನು ರಚಿಸಲು ಛೋಟಾನ್ ಘೋಷ್ ಮತ್ತು ಆತನ ಸ್ನೇಹಿತರು ಐದು ದಿನಗಳನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ಈ ಪ್ರತಿಕೃತಿಯನ್ನು ರಚಿಸಲು ಬಿಸ್ಕೆಟ್ ಜೊತೆಗೆ ಥರ್ಮಕೋಲ್, ಪ್ಲೈವುಡ್ ಮತ್ತು ಗಮ್​​​​​ಗಳನ್ನು ಸಹ ಬಳಸಿದ್ದಾರೆ.

@durgapur_times ಎಂಬ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ಕುರಿತ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, 20 ಕೆ.ಜಿ ಬಿಸ್ಕೆಟ್​​​ಗಳನ್ನು ಬಳಸಿ ತಯಾರಿಸಿದಂತಹ ರಾಮ ಮಂದಿರ ಪ್ರತಿಕೃತಿ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ನೆಟ್ಟಿಗರು ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *