ಪಾರ್ಸೆಲ್ ಸಾಗಾಟದ ಸೋಗಿನಲ್ಲಿ ಮಾದಕವಸ್ತು ಮಾರಾಟ: ಇಬ್ಬರ ಬಂಧನ

ಕಾಸರಗೋಡು: ಪಾರ್ಸೆಲ್ ಸಾಗಾಟದ ಸೋಗಿನಲ್ಲಿ ಬೈಕ್ ನಲ್ಲಿ ಮಾದಕವಸ್ತು ಸಾಗಾಟ ಮಾಡುತ್ತಿದ್ದ ಇಬ್ಬರನ್ನು  ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಇವರ ಬಳಿಯಿಂದ 12.53 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಕೂಡ್ಲು ನೀರ್ಚಾಲ್ ನ  ಅಮಾನ್ ಸಾಜದ್  ( 20) ಮತ್ತು ಅಡ್ಕತ್ತ ಬೈಲ್ ನ  ಕೆ. ಎಂ ಅಮೀರ್ (34) ಬಂಧಿತರು. ಇವರು ಸಂಚರಿಸು ತ್ತಿದ್ದ ಬೈಕ್ ನ್ನು  ವಶಪಡಿಸಿಕೊಳ್ಳಲಾಗಿದೆ.  ವಾಹನ ತಪಾಸಣೆ ನಡೆಸುತ್ತಿದ್ದ ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ಬೈಕ್ ನ್ನು  ತಡೆದು ತಪಾಸಣೆ ನಡೆಸಿದಾಗ ಮಾದಕ ವಸ್ತು ಪತ್ತೆಯಾಗಿದೆ.

ಪಾರ್ಸೆಲ್ ಸರ್ವಿಸ್ ಹೆಸರಿನಲ್ಲಿ ಇವರು ಮಾದಕ ವಸ್ತು ಸಾಗಾಟ ಮಾಡು ತ್ತಿದ್ದುದಾಗಿ  ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Font Awesome Icons

Leave a Reply

Your email address will not be published. Required fields are marked *