ಪಿಒಕೆಯಲ್ಲಿರುವ ಶಾರದಾ ಮಂದಿರ ಆಕ್ರಮಿಸಿದ ಪಾಕ್‌ ಸೇನೆ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ)ದಲ್ಲಿರುವ ಶಾರದಾ ಮಂದಿರದ ಆವರಣವನ್ನು ಪಾಕಿಸ್ತಾನ ಸೇನೆ ಅತಿಕ್ರಮಣ ಮಾಡಿದ್ದು, ಅದನ್ನು ತೆರವುಗೊಳಿಸಲು ಶಾರದಾ ಮಂದಿರ ಉಳಿಸಿ ಸಮಿತಿ(ಎಸ್‌ಎಸ್‌ಸಿ) ಶುಕ್ರವಾರ ಕೇಂದ್ರ ಸರ್ಕಾರದ ಸಹಾಯ ಕೋರಿದೆ.

ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಎಸ್‌ಸಿ ಸಂಸ್ಥಾಪಕ ರವೀಂದರ್ ಪಂಡಿತ್, ನ್ಯಾಯಾಲಯದ ಆದೇಶದ ಹೊರತಾಗಿಯೂ ಪಾಕಿಸ್ತಾನ ಸೇನೆಯು ಶಿಥಿಲಗೊಂಡಿರುವ ಹಳೆಯ ಶಾರದಾ ದೇವಸ್ಥಾನದ ಆವರಣವನ್ನು ಅತಿಕ್ರಮಿಸಿ ಕಾಫಿ ಹೋಮ್ ತೆರೆದಿದೆ ಎಂದು ಆರೋಪಿಸಿದರು.

ಶಾರದಾ ಪೀಠದ ಆವರಣದಲ್ಲಿ ಪಾಕಿಸ್ತಾನ ಸೇನೆಯು ಇತ್ತೀಚೆಗೆ ನಿರ್ಮಿಸಿರುವ ಕಾಫಿ ಹೋಮ್‌ನ ಅತಿಕ್ರಮಣ ಮತ್ತು ತೆರವು ಕುರಿತು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಶಾರದಾ ಮಂದಿರ ಉಳಿಸಿ ಸಮಿತಿ ಮನವಿ ಮಾಡಿದೆ.

Font Awesome Icons

Leave a Reply

Your email address will not be published. Required fields are marked *