ವಿಜಯಪುರ: ಸರ್ಕಾರ ಒಂದು ಕೋಮಿನ ಅಥವಾ ಗುಂಪಿನ ಸ್ವತ್ತಲ್ಲ. ಸರ್ಕಾರ ಎಲ್ಲಾ ಪ್ರಜೆಗಳನ್ನು ಸಮಾನವಾಗಿ ಕಾಣಬೇಕು. ಇದು ಅಧಿಕಾರದಲ್ಲಿದ್ದವರ ಕರ್ತವ್ಯವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಪೇಜಾವರ ಶ್ರೀಗಳು ಹೇಳಿದರು.
ಅವರು ವಿಜಯಪುರದಲ್ಲಿ ಮಾತನಾಡಿ, ನಗರ್ತ್‍ಪೇಟೆಯಲ್ಲಿ ಹನುಮಾನ್ ಚಾಲಿಸಾ ಹಾಕಿ ಹಲ್ಲೆಗೊಳಗಾದ ಮುಖೇಶ್ ಮೇಲೆ ಕೇಸ್ ಹಾಕಿದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ದುಷ್ಕೃತ್ಯಗಳಿಗೆ ಕೈ ಹಾಕಬಾರದು. ಎಲ್ಲಾ ಸಮಾಜಗಳನ್ನು ಒಟ್ಟಾಗಿ ಕೊಂಡೊಯ್ಯುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದರು.