ಪ್ರಜೆಗಳು ಪ್ರಭುಗಳಾದಾಗಲೇ ನಿಜವಾದ ಸ್ವಾತಂತ್ರ್ಯ- ಕವಿ ಬಿ.ಆರ್. ಲಕ್ಷ್ಮಣರಾವ್ – Just Kannada | Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್

ಬೆಂಗಳೂರುಆಗಸ್ಟ್.15,2023(www.justkannada.in):  ‘ದೇಶ ಭ್ರಷ್ಟಾಚಾರ, ಜಾತಿಪದ್ಧತಿ, ಕೋಮುದ್ವೇಷದಿಂದ ಬಿಡುಗಡೆ ಹೊಂದಿ, ಪ್ರಜೆಗಳೇ ಪ್ರಭುಗಳಾದಾಗ ಮಾತ್ರ ಸಂಪೂರ್ಣ ಸ್ವಾತಂತ್ರ್ಯ ಎನ್ನಲು ಸಾಧ್ಯ’ ಎಂದು ಹಿರಿಯ ಕವಿ, ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಅಭಿಪ್ರಾಯಪಟ್ಟರು.

ಜಯನಗರ ನ್ಯಾಶನಲ್ ಕಾಲೇಜಿನಲ್ಲಿ  77ನೇ ಸ್ವಾತಂತ್ರ್ಯ ದಿನಾಚಾರಣೆಯ ದ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ‘ಸ್ವಾತಂತ್ರ್ಯ ಭಾರತ ಎಲ್ಲಾ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಸಾಧಿಸುತ್ತಿದೆ. ಇದಕ್ಕೆ ದೇಶದ ಪ್ರಜೆಗಳೆಲ್ಲರೂ ಅಭಿನಂದನಾರ್ಹರು. ಎಲ್ಲಾ ಅಭಿವೃದ್ಧಿಗಳು ನಾವು ಬದುಕಿರುವ ಕಾಲಘಟ್ಟದಲ್ಲೇ ಅಗಬೇಕೆಂದರೆ ಸಾಧ್ಯವಿಲ್ಲ, ಇನ್ನೂ ಹಲವಾರು ವರ್ಷಗಳ ಕಾಯುವಿಕೆ ಇದೆ’ ಎಂದರು. ಇದೇ ವೇಳೆ ವಿದ್ಯಾರ್ಥಿಗಳಿಂದ ದೇಶಭಕ್ತಿ ಸಾರುವ ವಿವಿಧ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಕರಿಸಂದ್ರ ವಾರ್ಡ್ ನ ಮಾಜಿ ಕಾರ್ಪೊರೇಟರ್ ಲಕ್ಷ್ಮೀಕಾಂತ್, ನ್ಯಾಷನಲ್ ಕಾಲೇಜಿನ ಚೇರ್ ಮನ್, ಸಹಕಾರ ರತ್ನ ಡಾ.ಪಿ.ಎಲ್. ವೆಂಕಟರಾಮರೆಡ್ಡಿ, ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಸುರೇಶ, ಉಪಪ್ರಾಂಶುಪಾಲ ಪ್ರೊ.ಚೆಲುವಪ್ಪ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಸ್. ಮಮತಾ, ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Key words: 77th Independence Day -True freedom –people-Poet -B.R. Laxman Rao

Font Awesome Icons

Leave a Reply

Your email address will not be published. Required fields are marked *