ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಮತ್ತು ಟಾಲಿವುಡ್ ಸೂಪರ್ ಸ್ಟಾರ್ ಪ್ರಭಾಸ್ ಮದುವೆ ಅವರ ಮನೆ ಮಂದಿಗೆ ಮಾತ್ರವಲ್ಲ ಅದೆಷ್ಟೋ ಅಭಿಮಾನಿಗಳ ಕನಸ್ಸಾಗಿ ಉಳಿದುಬಿಟ್ಟಿದೆ. ಈಗ ಮದುವೆ ಆಗುತ್ತಾರೆ ಆಗ ಮದುವೆ ಆಗುತ್ತಾರೆ ಅನ್ನೋ ಗಾಸಿಪ್ ಕೇಳಿ ಕೇಳಿ ಬೇಸರವಾಗಿದೆ. ಈ ನಡುವೆ ಸಾಕಷ್ಟು ಜ್ಯೋತಿಷಿಗಳು ಭವಿಷ್ಯ ನುಡಿದು ನುಡಿದು ಸುಸ್ತಾಗಿದ್ದಾರೆ. ಅದರಲೂ ಸೆಲೆಬ್ರಿಟಿ ಜ್ಯೋತಿಷಿ ವೇಣು ಸ್ವಾಮಿ ನೀಡುವ ಹೇಳಿಕೆಗಳು ಸತ್ಯವಾಗುತ್ತದೆ ಅನ್ನೋ ಮಾತುಗಳಿದೆ.
ಇತ್ತೀಚಿಗೆ ಪ್ರಭಾಸ್ ಮದುವೆ ಆಗುವ ಯೋಗವಿಲ್ಲ ಎಂದು ವೇಣು ನೀಡಿರುವ ಹೇಳಿಕೆ ವೈರಲ್ ಆಗಿದೆ. ಪ್ರಭಾಸ್ ಈ ಜನ್ಮದಲ್ಲಿ ಮದುವೆ ಆಗುವುದಿಲ್ಲ. ಅವರಿಗೆ ಮದುವೆ ಆಗುವ ಯೋಗವಿಲ್ಲ. ಅವರ ಮದುವೆ ವಿಚಾರದಲ್ಲಿ ಹಲವು ಸಮಸ್ಯೆಗಳಿವೆ ಎಂದು ವೇಣು ಸ್ವಾಮಿ ಖಾಸಗಿ ಯುಟ್ಯೂಬ್ ಸಂದರ್ಶನದಲ್ಲಿ ನೀಡಿದ ಹೇಳಿಕೆ ವೈರಲ್ ಆಗುತ್ತಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗುತ್ತಿದೆ.
ಪ್ರಭಾಸ್ ಮದುವೆ ಬಗ್ಗೆ ಮಾತ್ರವಲ್ಲ ಅವರ ವೈಯಕ್ತಿಕ ಬದುಕಿನ ಬಗ್ಗೆನೂ ಕಾಮೆಂಟ್ ಮಾಡಿದ್ದಾರೆ. ಪ್ರಭಾಸ್ ಬಾಹುಬಲಿ ಚಿತ್ರದ ನಂತರ ಉತ್ತುಂಗಕ್ಕೆ ಹೋಗಿದ್ದಾರೆ ಆದರೆ ಇನ್ನು ಅವರ ಡೌನ್ ಫಾನ್ ಶುರುವಾಗುತ್ತೆ ಎಂದು ಹೇಳಿದ್ದಾರೆ. ವೇಣು ಸ್ವಾಮಿಗಳ ಮಾತುಗಳಿಂದ ಅಭಿಮಾನಿಗಳು ಗರಂ ಆಗಿದ್ದಾರೆ.