ಪ್ರೀತಂ ಗೌಡ – News Karnataka Kannada (ನ್ಯೂಸ್ ಕರ್ನಾಟಕ ಕನ್ನಡ)

ಹಾಸನ: ಹೊಳೆನರಸಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಗೆ ಬರುವಂತಹ ಮತಕ್ಕಿಂತ ಒಂದು ಮತ ಹೆಚ್ಚಾಗಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಬರಲಿದೆ ಎಂದು ಪ್ರೀತಂ ಗೌಡ ಹೇಳಿದ್ದಾರೆ.

ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು ರಾಜ್ಯದಲ್ಲಿ ೨೮ಕ್ಕೆ ೨೮ ಸ್ಥಾನ ಗೆಲ್ಲುವ ಮೂಲಕ ಇಡೀ ದೇಶದಲ್ಲಿ ೪೦೦ ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿಯೊಂದಿಗೆ ಪ್ರಚಾರವನ್ನು ಅರಬ್ಬಿಸಿದ್ದೇವೆ. ಹಿರಿಯರು ನಮಗೆ ಒಂದು ಜವಾಬ್ದಾರಿ ಕೊಟ್ಟಿದ್ದಾರೆ. ಅದರಂತೆ ಕೆಲಸ ಮಾಡಲಾಗುತ್ತಿದ್ದು ಇಂದು ನಗರದ ಬೂತ್ ನಂಬರ್ ೮೯ ರಿಂದ ಪ್ರಚಾರ ಅಧಿಕೃತವಾಗಿ ಆರಂಭಿಸಿದ್ದೇವೆ ಎಂದರು.

ಪ್ರೀತಂ ಗೌಡರನ್ನು ಕಾಂಟ್ಯಾಕ್ಟ್ ಮಾಡದ ಜೆಡಿಎಸ್ ನಾಯಕರು: ಬೂತ್ ಗೆದ್ದರೆ ದೇಶ ಗೆಲ್ಲಬಹುದು ಎಂಬ ಕಲ್ಪನೆ ನಮ್ಮದು ಯಾರು ಯಾರ ಒತ್ತಡಕ್ಕೂ ಮಣಿಯಲ್ಲ ಎಂದು ಸ್ಪಷ್ಟವಾಗಿ ಹೇಳುತ್ತೇನೆ. ಮೇಲೆ ತೀರ್ಮಾನ ಆದಮೇಲೆ ಕೆಲಸ ಮಾಡಬೇಕು, ಯಾರು ಯಾರನ್ನ ಸಂಪರ್ಕ ಮಾಡುವುದು ಇರುವುದಿಲ್ಲ ಎಂದು ಹೇಳುವ ಮೂಲಕ ಪ್ರಜ್ವಲ್ ರೇವಣ್ಣ ಹಾಗೂ ಆ ಪಕ್ಷದ ಮುಖಂಡರು ತಮ್ಮನ್ನು ಭೇಟಿ ಮಾಡಿರದ ಕುರಿತು ಪರೋಕ್ಷವಾಗಿ ಹೇಳಿದರು.

ಪ್ರಜ್ವಲ್ ಹೆಸರು ಹೇಳದ ಮಾಜಿ ಶಾಸಕ: ಕಾಂಗ್ರೆಸ್ ಅಭ್ಯರ್ಥಿಗಿಂತ ಎನ್.ಡಿ.ಎ ಅಭ್ಯರ್ಥಿ ಎಷ್ಟು ಲೀಡ್ ತೆಗೆದುಕೊಳ್ಳುತ್ತಾರೆ ಅದಕ್ಕಿಂತ ಒಂದು ಮತ ಹೆಚ್ಚಿಗೆ ಕೊಡಿಸುವುದೇ ನನ್ನ ಗುರಿಯಾಗಿದೆ ಎಂದು ಪ್ರೀತಮ್ ಹೇಳಿದರು.. ಯಾರೇ ಆದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಮತ ಕೇಳಬೇಕು ಕರ್ನಾಟಕದಿಂದ ಕಾಶ್ಮೀರದವರೆಗೆ ಮೋದಿ ಅವರ ಹೆಸರಿನಲ್ಲಿ ಮತವನ್ನು ಯಾಚಿಸಬೇಕಿದೆ ಎಂದ ಅವರು ಎಲ್ಲಿಯೂ ಸಹ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಹೆಸರು ಉಲ್ಲೇಖಿಸಲಿಲ್ಲ.

ಓರ್ವ ಬಿಜೆಪಿ ಕಾರ್ಯಕರ್ತನಾಗಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಆರಂಭಿಸಿದ್ದೇನೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ, ಪ್ರೀತಮ್ ಗೌಡ ಹೇಳಿದರು.

ಪ್ರಪಂಚದಲ್ಲಿಯೇ ದೊಡ್ಡ ಪಕ್ಷವಾದ ಬಿಜೆಪಿ ಯಲ್ಲಿ ವ್ಯಕ್ತಿಗಿಂತ ಪಕ್ಷ ಪಕ್ಷಕ್ಕಿಂತ ದೇಶ ದೊಡ್ಡದು ಎಂದು ಮುನ್ನಡೆ ಯುತ್ತಾ ಬಂದಿದೆ. ಬೂತ್ ಗೆದ್ದರೆ ದೇಶ ಹಾಗೂ ಚುನಾವಣೆ ಗೆದ್ದಂತೆ ಎಂದು ನಂಬಿದ್ದೇವೆ. ನಾಳೆ ಶಾಸಕರಾದ ಸಿಮೆಂಟ್ ಮಂಜು, ಜಿಲ್ಲಾ ಬಿಜೆಪಿ ಅಧ್ಯಕ್ಷರು ಆಲೂರಿನಲ್ಲಿ ಪ್ರಚಾರ ಮಾಡಲು ಸೂಚನೆ ಕೊಟ್ಟಿದ್ದೇನೆ. ಅವರು ಸಹ ತಮ್ಮ ತಮ್ಮ ಬೂತ್ ಗಳಿಂದ ಪ್ರಚಾರ ಆರಂಭಿಸಲಿದ್ದಾರೆ ಎಂದರು.

ಈ ಬಾರಿಯ ಚುನಾವ ಣೆಯನ್ನು ನಾನು ಚಾಲೆಂಜ್ ಆಗಿ ತೆಗೆದುಕೊಂಡಿದ್ದೇನೆ ಎನ್ ಡಿ ಎ ಕೂಟ ಗೆಲ್ಲಿಸುವುದೇ ನಮ್ಮ ಗುರಿ ರೇವಣ್ಣ ಅವರ ಸ್ವಕ್ಷೇತ್ರವಾದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರಕ್ಕಿಂತ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಮತವನ್ನು ಹೆಚ್ಚಿಗೆ ಕೊಡಿಸಲು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದೇನೆ ಎಂದರು.

ಮಾಜಿ ಸಚಿವ ಎಚ್.ಡಿ. ರೇವಣ್ಣ ಆರು ಬಾರಿ ಶಾಸಕರು ಅವರ ತಂದೆ ಪ್ರಧಾನಮಂತ್ರಿ ಯಾಗಿದ್ದವರು, ಎನ್.ಡಿ.ಎ ಅಭ್ಯರ್ಥಿ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಮತ ತೆಗೆದುಕೊಳ್ಳುತ್ತಾರೆ ಅದಕ್ಕಿಂತ ಒಂದು ಮತ ಹೆಚ್ಚಿಗೆ ಕೊಡಿಸುತ್ತೇನೆ ಇದನ್ನು ನಾನು ಪ್ರತಿಷ್ಠೆಯಾಗಿ ತೆಗೆದು ಕೊಂಡಿದ್ದೇನೆ ಎಂದು ಪುನರ್‌ಉಚ್ಚರಿಸಿದರು.

ನಾನು ಸೋತಿರುವವನು ನನ್ನ ಬಳಿ ಶ್ರಮ ಇದೆ ಅವರ ಶಾಸಕರು ಇದ್ದಾರೆ ಶಕ್ತಿ ಅವರ ಬಳಿ ಇದೆ ಎಂದು ಹೇಳಿದ ಅವರು ನಾನು ಸಹಕಾರ ಕೊಡುವಷ್ಟು ಮಾತ್ರ ಶಕ್ತನಾಗಿದ್ದೇನೆಂದರು.

ಹಾಸನ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಮೈತ್ರಿ ಧರ್ಮ ಪಾಲಿಸುತ್ತಿಲ್ಲ ಎಂದು ಕೇಂದ್ರಕ್ಕೆ ದೂರು ಹೋಗಿದೆಯೇ ಎಂಬ ಪ್ರಶ್ನೆಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಪ್ರೀತಮ್ ಗೌಡ ಅವರು “ನಾನು ಪ್ರೀತಿ ತೋರಿಸಿದರೆ ಕೆಲಸ ಮಾಡುವವನು, ದೂರು ನೀಡಿದರೆ ನನಗೆ ರಾಜಕೀಯ ಬೇಡ ಅಂತ ಮನೆಯಲ್ಲಿ ಕೂರುತ್ತೇನೆ” ನನಗೆ ಯಾವ ರಾಜ್ಯ, ಕೇಂದ್ರದ ಬಿಜೆಪಿ ನಾಯಕರು ಸೂಚನೆ ಕೊಟ್ಟಿಲ್ಲ ಬೇಕಿದ್ದರೆ ಯಾರನ್ನಾದರೂ ಕೇಳಿ ಎಂದು ಹೇಳಿದರು.

ನನ್ನನ್ನು ಭಾವಿ ಕಪ್ಪೆಯಾಗಿ ಇರುವುದು ಬೇಡ ಎಂದು ಎರಡು ಲೋಕಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ಕೊಟ್ಟಿದ್ದಾರೆ ಅತಿ ಚಿಕ್ಕ ವಯಸ್ಸಿನಲ್ಲಿಯೇ ನನಗೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯ ದರ್ಶಿ ಸ್ಥಾನ ನೀಡಿದ್ದು ಓರ್ವ ಸರ್ಕಾರಿ ನೌಕರನ ಮಗನನ್ನು ರಾಜ್ಯಮಟ್ಟದಲ್ಲಿ ಬೆಳೆಸುವುದೇ ಬಿಜೆಪಿಯ ಬಲವಾಗಿದೆ ಎಂದರು.

ನಮ್ಮ ರಾಜ್ಯಧ್ಯಕ್ಷರ ಏನು ಸೂಚನೆ ನೀಡುತ್ತಾರೆ ಆ ಕೆಲಸ ಮಾಡುತ್ತೇನೆ ಈಗಾಗಲೇ ಬೂತ್ ಮಟ್ಟದಲ್ಲಿ ಪದಾಧಿಕಾರಿಗಳು ತಾಲೂಕು ಜಿಲ್ಲಾ ಮಟ್ಟದ ಪದಾಧಿಕಾರಿಗಳು ಸೂಚನೆ ಕೊಟ್ಟಿದ್ದೇನೆ ಎಂದರು.

ಪ್ರೀತಂ ಗೌಡ ಅವರು ಈ ವೇಳೆ ಎಲ್ಲಿಯೂ ಸಹ ಪ್ರಜ್ವಲ್ ರೇವಣ್ಣ ಅವರ ಹೆಸರನ್ನು ಉಲ್ಲೇಖಿಸಲಿಲ್ಲ ಕೇವಲ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದೇವೆ ಎಂದಷ್ಟೇ ಹೇಳಿದರು.

ಈ ವೇಳೆ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವೇಣು ಗೋಪಾಲ್, ಪ್ರದೀಪ್ ,ಗುರು ಪ್ರಸಾದ್ ಇತರರು ಉಪಸ್ಥಿತರಿದ್ದರು.

Font Awesome Icons

Leave a Reply

Your email address will not be published. Required fields are marked *