ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಒಂದೆಡೆ ಪ್ಲೈ ಓವರ್‌ನ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಸಾಯಂಕಾಲ ಆದ್ರೆ ಪ್ಲೈ ಓವರ್ ಕೆಳಗೆ ಹೋಗಬೇಕಾದ್ರೆ ಪಾದಾಚಾರಿಗಳು ಭಯದಲ್ಲಿ ಸಾಗುವಂತೆ ಆಗಿದೆ.
ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಹುಬ್ಬಳ್ಳಿಯಲ್ಲಿ ಪ್ಲೈ ಓವರ್ ನಿರ್ಮಾಣ ಮಾಡುತ್ತಿದ್ದಾರೆ. ಆದ್ರೆ ಹೊಸೂರಿನ ಗಾಳಿ ದುರ್ಗಮ್ಮ ದೇವಸ್ಥಾನ, ಐಟಿ ಪಾರ್ಕ್ ಮುಂಭಾಗದಲ್ಲಿ ಬೃಹತ್ ಪ್ಲೈ ಓವರ್ ನಿರ್ಮಾಣ ಮಾಡಿದ್ದಾರೆ. ಆದ್ರೆ ಅಲ್ಲಿ ಸಾಯಂಕಾಲ ಆದ್ರೆ ಸಾಕು ಪಾದಾಚಾರಿಗಳು ಹೋಗಲು ಭಯ ಪಡುತ್ತಿದ್ದಾರೆ.
ಯಾಕೆಂದ್ರೆ ಬೀದಿ ದೀಪಗಳು ಇಲ್ಲದೆ ಕತ್ತಲಲ್ಲಿ ಓಡಾಡುವಂತಾಗಿದೆ. ಚಿಕ್ಕದಾದ ರಸ್ತೆ ಒಂದು ಕಡೆಯಾದ್ರೆ, ವಾಹನಗಳು ವೇಗವಾಗಿ ಬರುತ್ತಿದ್ದರೆ, ಇತ್ತ ಪಾದಾಚಾರಿಗಳು ಎಲ್ಲೆ ಹೇಗೆ ಹೋಗಬೇಕೆಂದು ಪರದಾಡುವಂತಾಗಿದೆ. ಬೀದಿ ದೀಪ ಇಲ್ಲದೆ ಕತ್ತಲಲ್ಲಿ ಹೋಗುವಾಗ ಪ್ಲೈ ಓವರ್ ಪಿಲ್ಲರ್ ಗೆ ಬೈಕ್ ಸವಾರರು ಗುದ್ದಿದ ಉದಾಹರಣೆ ಇದೆ..
ಕೂಡಲೇ ಪಾಲಿಕೆ ಅಧಿಕಾರಿಗಳು ಎಲ್ಲ ಪ್ಲೈ ಓವರ್ ಕೆಳ ಭಾಗದಲ್ಲಿ ಬೀದಿ ದೀಪಗಳನ್ನು ಅಳವಡಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಪಾದಚಾರಿಗಳ ಸಂಕಷ್ಟ ತಿಳಿಯಬೇಕಿದೆ.