ಫಿನಾಲೆವರೆಗೂ ಬಂದಿದ್ದ ತುಕಾಲಿ ಸಂತು ಎಲಿಮಿನೇಟ್

ಬಿಗ್​ಬಾಸ್ ಕನ್ನಡ ಸೀಸನ್ 10 ಫಿನಾಲೆಯ ಹಂತಕ್ಕೆ ತಲುಪಿದ್ದು ಇದೀಗ ಫಿನಾಲೆಯಲ್ಲಿ ಇದ್ದ 6 ಸ್ಪರ್ಧಿಗಳಲ್ಲಿ ಓರ್ವ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ.

ಮನೆಯಲ್ಲಿ ಎಲ್ಲರನ್ನೂ ನಗಿಸುತ್ತಾ, ಚಾಣಾಕ್ಷ ಆಟವಾಡುತ್ತಾ ಫಿನಾಲೆ ವರೆಗೂ ಬಂದಿದ್ದ ತುಕಾಲಿ ಸಂತು ಎಲಿಮಿನೇಟ್ ಆಗಿದ್ದು ಮನೆಯಿಂದ ಹೊರ ಬಂದಿದ್ದಾರೆ.

ಹೊರ ಬಂದು ಸುದೀಪ್ ಅವರನ್ನು ಭೇಟಿಯಾದ ತುಕಾಲಿ ಸಂತು, ‘ನಾನು ಸೋತಿಲ್ಲ, ಗೆದ್ದಿದ್ದೇನೆ. ಇಷ್ಟು ದಿನ ನಾನು ಇಲ್ಲಿವರೆಗೆ ಬಂದಿರುವುದೇ ನನ್ನ ಅತಿ ದೊಡ್ಡ ಗೆಲುವು’ ಎಂದರು. ಬಿಗ್​ಬಾಸ್ ಮನೆ ನನಗೆ ಸಾಕಷ್ಟು ಕಲಿಸಿದೆ. ಹಸಿವು, ಪರಸ್ಪರರನ್ನು ಅರ್ಥ ಮಾಡಿಕೊಳ್ಳುವುದು, ಅವಶ್ಯಕತೆ ಬಿದ್ದಾಗ ಮಾತನಾಡುವುದು ಎಲ್ಲವನ್ನು ಕಲಿಸಿದೆ ಎಂದರು. ನನ್ನ ಪತ್ನಿಯನ್ನು ಸರಿಯಾಗಿ ನೋಡಿಕೊಂಡಿರಲಿಲ್ಲ. ಇನ್ನು ಮೇಲಿನಿಂದ ಆ ತಪ್ಪು ಮಾಡುವುದಿಲ್ಲ. ಅವಳಿಗೆ ಒಳ್ಳೆಯ ಬಟ್ಟೆ, ಊಟ ಕೊಡಿಸುತ್ತೀನಿ ಎಂದಿದ್ದಾರೆ.

ಇನ್ನು ಮನೆಯಲ್ಲಿ ಐವರು ಸ್ಪರ್ಧಿಗಳಾದ, ಸಂಗೀತಾ ಶೃಂಗೇರಿ, ಕಾರ್ತಿಕ್ ಮಹೇಶ್, ವಿನಯ್ ಗೌಡ, ಡ್ರೋನ್ ಪ್ರತಾಪ್ ಹಾಗೂ ವರ್ತೂರು ಸಂತೋಷ್ ಉಳಿದಿದ್ದಾರೆ. ಇವರಲ್ಲಿ ಯಾರು ವಿಜೇತರಾಗುತ್ತಾರೆ ಎಂದು ಕಾದು ನೋಡಬೇಕಿದೆ.

Font Awesome Icons

Leave a Reply

Your email address will not be published. Required fields are marked *