ಫೆ.02ರಂದು ಕರಾವಳಿಯಲ್ಲಿ ತೆರೆಗೆ ಅಪ್ಪಳಿಸಲಿದೆ ಸಸ್ಪೆನ್ಸ್‌ ಥ್ರಿಲ್ಲರ್‌ “ಕ್ಲಾಂತ” ಸಿನಿಮಾ

ಮಂಗಳೂರು:  ಕನ್ನಡ ಹೊಸ ಸಿನಿಮಾ ಕ್ಲಾಂತ ಸಿನೆಮಾ ಈಗಾಗಲೇ ಬೆಂಗಳೂರಿನಲ್ಲಿ ಬಿಡುಗಡೆಯಾಗಿದೆ. ತುಳುನಾಡಿನವರೇ ಸೇರಿ ನಿರ್ಮಾಣ ಮಾಡಿರುವ ಈ ಚಿತ್ರದ ಟೀಸರ್‌ ಈಗಾಗಲೇ ಕುತೂಹಲ ಹುಟ್ಟಿಸಿದೆ. ಇನ್ನು ಕರಾವಳಿಯಲ್ಲಿ “ಕ್ಲಾಂತ” ಸಿನೆಮಾ ಫೆಬ್ರವರಿ 2ರಂದು ಕರಾವಳಿಯ ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಹೌದು. . ಅಕ್ಟೋಬರ್‌ನಲ್ಲಿ ಈ ಚಿತ್ರದ ಟೀಸರ್‌ ಬಿಡುಗಡೆಯಾಗಿನಿಂದ ಸಿನಿಮಾ ಹೊಸ ನಿರೀಕ್ಷೆ ಹುಟ್ಟಿಸಿದೆ. ದಟ್ಟ ಕಾನನದ ನಡುವೆ ಪ್ರೇಮಿಗಳ ರೋಮಾನ್ಸ್‌, ಬಳಿಕ ನಡೆಯುವ ಹೊಡೆದಾಟಗಳು ಚಿತ್ರದ ಕುರಿತು ನಿರೀಕ್ಷೆ ಹೆಚ್ಚಿಸಿವೆ.

ಈ ಚಿತ್ರಕ್ಕೆ ವೈಭವ್ ಪ್ರಶಾಂತ್ ನಿರ್ದೇಶನ ಮಾಡಿದ್ದು ವಿಘ್ನೇಶ್‌ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಹಿಂದೆ ತೆರೆಕಂಡಿದ್ದ ದಗಲ್ ಬಾಜಿಲು ತುಳು ಚಿತ್ರದ ಜೋಡಿ ಆದ ನಿರ್ದೇಶಕ ವೈಭವ್ ಪ್ರಶಾಂತ್ ಹಾಗೂ ನಾಯಕ ವಿಘ್ನೇಶ್‌ ಈ ಮೂಲಕ ಮತ್ತೊಮ್ಮೆ ಜೊತೆಯಾಗುತ್ತಿದ್ದಾರೆ. ಅಲ್ಲದೇ ಕ್ಲಾಂತ ಸಿನಿಮಾ ಮೂಲಕ ನಟಿ ಸಂಗೀತಾ ಭಟ್ ಮತ್ತೆ ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುತ್ತಿದ್ದಾರೆ.

ಗ್ಯಾಂಗ್ ಒಂದು ದಟ್ಟ ಅರಣ್ಯಕ್ಕೆ ತೆರಳುವ ಇಬ್ಬರು ಪ್ರೇಮಿಗಳನ್ನು ಅಟ್ಯಾಕ್ ಮಾಡುತ್ತದೆ. ಆ ಗ್ಯಾಂಗ್‌ನಿಂದ ಆ ಜೋಡಿ ಹೇಗೆ ತಪ್ಪಿಕೊಂಡು ಬರ್ತಾರೆ? ಆ ಗ್ಯಾಂಗ್ ವಿರುದ್ಧ ಹೇಗೆ ಹೋರಾಡುತ್ತಾರೆ ಅನ್ನೋದನ್ನು ಟೀಸರ್‌ನಲ್ಲಿ ತೋರಿಸಲಾಗಿದೆ.

ಇನ್ನು ಚಿತ್ರದ ನಾಯಕನ ನಟನೆ ಹಾಗೂ ಪವರ್ ಫುಲ್ ಆಕ್ಷನ್ ನೋಡಿ ಸಿನಿರಸಿಕರು ಇವರಿಗೆ ಕನ್ನಡ ಚಿತ್ರರಂಗದಲ್ಲಿ ಮಾಸ್ ಹೀರೋ ಆಗೋ ಎಲ್ಲ ಲಕ್ಷಣ ಇದೆ ಎಂದು ಹೇಳುತ್ತಿದ್ದಾರೆ. “ಎರಡನೇ ಸಲ ಹಾಗೂ ದಯವಿಟ್ಟು ಗಮನಿಸಿ” ಚಿತ್ರಗಳ ಖ್ಯಾತಿಯ ಸಂಗೀತ ಭಟ್ ಈ ಚಿತ್ರಕ್ಕೆ ನಾಯಕಿಯಾಗಿದ್ದಾರೆ ಅವರ ನಟನೆ ಹಾಗೂ ಆಕ್ಷನ್ ಗೂ ಎಲ್ಲಾ ಕಡೆ ಅದ್ಭುತ ಪ್ರಶಂಸೆ ವ್ಯಕ್ತವಾಗಿದೆ.

ಅನುಗ್ರಹ ಪವರ್ ಮೀಡಿಯಾ ಬ್ಯಾನರ್ ಅಡಿಯಲ್ಲಿ ಉದಯ್ ಅಮ್ಮನ್ಯ ಅವರ ಬೆಂಬಲ ಈ ಚಿತ್ರಕ್ಕಿದೆ. ಕ್ಲಾಂತಗೆ ಎಪಿ ಚಂದ್ರಕಾಂತ್ ಅವರ ಸಂಗೀತ, ಮೋಹನ್ ಲೋಕನಾಥನ್ ಅವರ ಛಾಯಾಗ್ರಹಣ ಮತ್ತು ಪಿಆರ್ ಸೌಂದರ್ ರಾಜ್ ಅವರ ಸಂಕಲನವಿದೆ.

ಸಿನಿಮಾದ ಮೂರು ಹಾಡುಗಳಿಗೆ ಎಸ್‌. ಪಿ ಚಂದ್ರಕಾಂತ್‌ ಸಂಗೀತ ಸಂಯೋಜಿಸಿದ್ದಾರೆ. ವಿಜಯ ಪ್ರಕಾಶ್‌, ನಯನಾ ನಾಗರಾಜ್‌, ರಾಜೇಶ್‌ ಕೃಷ್ಣನ್‌, ಚೇತನ್‌, ಐರಾ ಆಚಾರ್ಯ ಮೊದಲಾದವರು ಗೀತೆಗಳಿಗೆ ಧ್ವನಿಯಾಗಿದ್ದಾರೆ.

ಇನ್ನು ಇತ್ತೀಚೆಗಷ್ಟೇ ರಾಜೇಶ್ ಕೃಷ್ಣನ್ ಹಾಡಿರುವ ಕೊರಗಜ್ಜ ಕುರಿತ ಹಾಡನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದು, ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Font Awesome Icons

Leave a Reply

Your email address will not be published. Required fields are marked *