ಫ್ರಾನ್ಸ್: ಫ್ರಾನ್ಸ್ ಪ್ರಧಾನ ಮಂತ್ರಿ ಎಲಿಸಬೆತ್ ಬೋರ್ನ್ ಸೋಮವಾರ (ಜ.8) ರಾಜೀನಾಮೆ ನೀಡಿದ್ದಾರೆ.
ತನ್ನ ರಾಜೀನಾಮೆ ಪತ್ರದಲ್ಲಿ, ಬೋರ್ನ್ ಅವರು “ಹೊಸ ಪ್ರಧಾನ ಮಂತ್ರಿಯನ್ನು ನೇಮಿಸುವ” ಅಧ್ಯಕ್ಷರ “ಇಚ್ಛೆ” ಯನ್ನು ಉಲ್ಲೇಖಿಸಿ ಮ್ಯಾಕ್ರನ್ ಅವರ ಕೋರಿಕೆಯ ಮೇರೆಗೆ ರಾಜೀನಾಮೆ ನೀಡುತ್ತಿದ್ದೇನೆಂದು ಹೇಳಿದ್ದಾರೆ.
ಬೋರ್ನ್ ಅವರ ರಾಜೀನಾಮೆಯು ಮ್ಯಾಕ್ರನ್ ಬೆಂಬಲದೊಂದಿಗೆ ಕಳೆದ ತಿಂಗಳ ಕೊನೆಯಲ್ಲಿ ವಿವಾದಾಸ್ಪದ ವಲಸೆ ಶಾಸನದ ಅಂಗೀಕಾರ ಕಾರಣವಾಗಿದೆ. ಈ ಶಾಸನವು ಇತರ ಕ್ರಮಗಳ ಜೊತೆಗೆ ಕೆಲವು ವಿದೇಶಿಯರನ್ನು ಗಡೀಪಾರು ಮಾಡುವ ಸರ್ಕಾರದ ಸಾಮರ್ಥ್ಯವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.