ಬಹುಕಾಲದ ಗೆಳತಿ ಜೊತೆ ಗಾಯಕ ಅರ್ಮಾನ್ ಮಲಿಕ್ ಎಂಗೇಜ್‌

ಮುಂಬೈ: ಬಹುಭಾಷಾ ಗಾಯಕ ಅರ್ಮಾನ್ ಮಲಿಕ್ ಅವರು ಆಗಸ್ಟ್ 28ರಂದು ಬಹುಕಾಲದ ಗೆಳತಿ ಆಶ್ನಾ ಶ್ರಾಫ್ ಜತೆ ಎಂಗೇಜ್‌ ಆಗಿದ್ದಾರೆ. ಗೆಳತಿ ಆಶ್ನಾ ಶ್ರಾಫ್ ಅವರೊಂದಿಗಿನ ನಿಶ್ಚಿತಾರ್ಥದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಅರ್ಮಾನ್ ಮಲಿಕ್ ಈ ಸಿಹಿ ಸುದ್ದಿ ನೀಡಿದ ಬೆನ್ನಲ್ಲೇ ಅವರ ಅಭಿಮಾನಿಗಳು ಹಾರೈಸುತ್ತಿದ್ದಾರೆ. ಸುಂದರವಾಗಿ ಅಲಂಕರಿಸಿದ ಜಾಗವೊಂದರಲ್ಲಿ ಅರ್ಮಾನ್‌ ತಮ್ಮ ಮಂಡಿಯೂರಿ ಆಶ್ನಾ ಅವರ ಕೈಗೆ ರಿಂಗ್‌ಅನ್ನು ತೊಡಿಸುತ್ತಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ.

ಆಶ್ನಾ- ಅರ್ಮಾನ್ ಬಹು ಕಾಲದಿಂದ ಡೇಟಿಂಗ್ ಮಾಡುತ್ತಿದ್ದರು. ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಎಂಗೇಜ್ ಆಗಿದ್ದಾರೆ. ಸೋಷಿಯಲ್‌ ಮೀಡಿಯಾ ಸ್ಟಾರ್‌ ಆಶ್ನಾ ಜತೆಗೆ ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ.

Font Awesome Icons

Leave a Reply

Your email address will not be published. Required fields are marked *