ಬಾಬಾ ತರ್ಸೆಮ್ ಸಿಂಗ್ ಹತ್ಯೆ ಆರೋಪಿ ಅಮರ್ಜಿತ್ ಸಿಂಗ್ ಎನ್ಕೌಂಟರ್ ನಲ್ಲಿ ಹತ

ನವದೆಹಲಿ: ನಾನಕ್ಮಠ ಗುರುದ್ವಾರದ ‘ಕರಸೇವಾ’ ಮುಖ್ಯಸ್ಥ ಬಾಬಾ ತರ್ಸೆಮ್ ಸಿಂಗ್ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಮತ್ತು ಶೂಟರ್ ಅಮರ್ಜಿತ್ ಸಿಂಗ್ ಅಲಿಯಾಸ್ ಬಿಟ್ಟು ಇಂದು ಮುಂಜಾನೆ ಹರಿದ್ವಾರದ ಭಗವಾನ್ಪುರ ಪ್ರದೇಶದಲ್ಲಿ ಉತ್ತರಾಖಂಡ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಯೊಂದಿಗೆ ನಡೆದ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ ಎಂದು ವರದಿಯಾಗಿದೆ.

ಮಾರ್ಚ್ 28 ರಂದು ಉಧಮ್ ಸಿಂಗ್ ನಗರ ಜಿಲ್ಲೆಯ ನಾನಕ್ಮಟ್ಟಾ ಸಾಹಿಬ್ ಗುರುದ್ವಾರದ ಡೇರಾ ಮುಖ್ಯಸ್ಥ ಬಾಬಾ ತರ್ಸೆಮ್ ಸಿಂಗ್ ಅವರನ್ನು ಬೈಕ್ ನಲ್ಲಿ ಬಂದ ಸಶಸ್ತ್ರ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದ.

Font Awesome Icons

Leave a Reply

Your email address will not be published. Required fields are marked *