ಬಾಲಕನಿಗೆ ಟಾಯ್ಲೆಟ್‌ ನೀರು ಕುಡಿಸಿದ್ದ ಮಹಿಳೆಯ ಬಂಧನ

ಅಮೆರಿಕ: ಬಾಲಕನನ್ನು ಬಾತ್‌ರೂಮ್‌ಗೆ ಎಳೆದುಕೊಂಡು ಹೋಗಿ ಟಾಯ್ಲೆಟ್‌ ನೀರು ಕುಡಿಯುವಂತೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಟೆಕ್ಸಾಸ್‌ನ ವುಡ್‌ವೇಯಲ್ಲಿ ಬಂಧಿಸಲಾಗಿದೆ.

ಬಂಧಿತ ಮಹಿಳೆಯನ್ನು  ಡಿಯಾ ವೆಲೆಡಿಯಾಜ್-ಬೋನಿಫಾಜಿ ಎಂದು ಗುರುತಿಸಲಾಗಿದೆ.

ಬಾಲಕನ ಕೂದಲು ಹಿಡಿದು ಟಾಯ್ಲೆಟ್​ಗೆ ಎಳೆದೊಯ್ದು, ಟಾಯ್ಲೆಟ್​ ಗುಂಡಿಯೊಳಗಿದ್ದ ನೀರು ಕುಡಿಯುವಂತೆ ಮಹಿಳೆ ಒತ್ತಾಯಿಸಿದ್ದಳು. ಪರಿಣಾಮ ಆತನ ತಲೆಯ ಕೆಲವು ಭಾಗಗಳಲ್ಲಿ ಕೂದಲು ಉದುರಿ ಹೋಗಿದೆ.

ಇದಾದ ಬಳಿಕ ಬಾಲಕ ಅಳುತ್ತಲೇ ಶಾಲೆಗೆ ಬಂದಿದ್ದ ಆಗ ಶಿಕ್ಷಕರು ವಿಚಾರಿಸಿದಾಗ ನಡೆದ ವಿಚಾರವನ್ನು ತಿಳಿಸಿದ್ದ.

ಕ್ಷಣ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಇಲಾಖೆಯವರು ತನಿಖೆ ನಡೆಸಿದ್ದಾರೆ. ಡಿಯಾ ವೆಲೆಡಿಯಾಜ್-ಬೋನಿಫಾಜಿಯನ್ನು ಏಪ್ರಿಲ್ 3 ರಂದು ಬಂಧನದಲ್ಲಿರಿಸಲಾಗಿದೆ.

ಮಹಿಳೆಯು ಬಾಲಕನಿಗೆ ಪದೇ ಪದೇ ಹೊಡೆಯುತ್ತಿದ್ದಳು, ವಿವಿಧ ವಸ್ತುಗಳನ್ನು ಮೈಮೇಲೆ ಎಸೆಯುತ್ತಿದ್ದಳು, ದೀರ್ಘಕಾಲದವರೆಗೆ ಆಹಾರವನ್ನು ನೀಡುತ್ತಿರಲಿಲ್ಲ. ಈ ಬಾಲಕ ಹಲವು ಸಮಯಗಳಿಂದ ಹಿಂಸೆ ಅನುಭವಿಸಿದ್ದಾನೆ ಎಂಬುದು ತಿಳಿದು ಬಂದಿದೆ.

Font Awesome Icons

Leave a Reply

Your email address will not be published. Required fields are marked *