ಬಾಲಿವುಡ್ ನಟ ಶಾರುಖ್ ಖಾನ್ ಗೆ Y+ ಭದ್ರತೆ: ಯಾಕೆ ಗೊತ್ತ ?

ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಚಿತ್ರಗಳ ಯಶಸ್ಸಿನ ಬೆನ್ನಲೇ ನಟನಿಗೆ ಜೀವ ಬೆದರಿಕೆ ಬರತೊಡಗಿದ್ದು, ಇದೀಗ ಮಹಾರಾಷ್ಟ್ರ ಸರಕಾರ ನಟನ ಭದ್ರತೆಯನ್ನು Y+ ಗೆ ಹೆಚ್ಚಿಸಿದೆ. ಇದಕ್ಕೂ ಮುನ್ನ ಅವರ ಭದ್ರತೆಗೆ ಇಬ್ಬರು ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿತ್ತು. ಜೊತೆಗೆ ಭದ್ರತೆಗಾಗಿ ಅವರದೇ ಆದ ವೈಯಕ್ತಿಕ ಅಂಗರಕ್ಷಕರಿದ್ದರು. ಆದರೀಗ ಹೈ-ಪವರ್ ಕಮಿಟಿಯ ಶಿಫಾರಸುಗಳನ್ನು ಅನುಸರಿಸಿ ಶಾರುಖ್ ಖಾನ್ ಅವರ ಭದ್ರತೆಯನ್ನು Y+ ಭದ್ರತೆಗೆ ಮೇಲ್ದರ್ಜೆಗೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರ ಮಾಹಿತಿ ಪ್ರಕಾರ, ನಟ ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಬ್ಲಾಕ್‌ ಟು ಬ್ಯಾಕ್‌ ಬ್ಲಾಕ್ ಬಾಸ್ಟರ್ ಸಿನಿಮಾಗಳನ್ನು ನೀಡಿದ ಬೆನ್ನಲ್ಲೇ ತನಗೆ ಕೊಲೆ ಬೆದರಿಕೆಗಳು ಬರುತ್ತಿವೆ. ತನ್ನ ಭದ್ರತೆ ಹೆಚ್ಚಿಸುವಂತೆ ಮನವಿ ಮಾಡಿದ್ದರು. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ನಟನಿಗೆ ಒದಗಿಸಲಾದ ಭದ್ರತೆಯನ್ನು ಹೆಚ್ಚಿಸಲು ನಿರ್ಧರಿಸಿತು ಎಂದು ಹೇಳಿದ್ದಾರೆ.

Font Awesome Icons

Leave a Reply

Your email address will not be published. Required fields are marked *