ಬಾಲಿವುಡ್ ನಿಂದ ಆಫರ್ ಬಂದಿದ್ದು ನಿಜ ಎಂದ ನಟ ಮಹೇಶ್ ಬಾಬು

ತೆಲುಗು ನಟ ಮಹೇಶ್ ಬಾಬು ಅವರಿಗೆ ಬಾಲಿವುಡ್ ನಿಂದ ಆಫರ್ ಬಂದಿರೋ ವಿಚಾರ ತೆಲುಗು ಚಿತ್ರೋದ್ಯಮದಲ್ಲಿ ಭಾರೀ ಸಂಚಲನ ಸೃಷ್ಟಿ ಮಾಡಿತ್ತು. ಇದೀಗ ಈ ಬಗ್ಗೆ ಸ್ವತಃ ಮಹೇಶ್ ಬಾಬು ಉತ್ತರಿಸಿದ್ದಾರೆ. ಆಫರ್ ಬಂದಿದ್ದು ನಿಜ. ಆದರೆ, ನಾನು ಅದನ್ನು ಒಪ್ಪಿಕೊಳ್ಳಲಿಲ್ಲ ಎಂದಿದ್ದಾರೆ.

ರಾಜಮೌಳಿ ಮತ್ತು ಮಹೇಶ್ ಬಾಬು ಕಾಂಬಿನೇಷನ್ ನ ಹೊಸ ಚಿತ್ರ ಬಯಸಿದ್ದು, ಈ ಸಿನಿಮಾಕ್ಕೆ ಸಿಂಪಲ್ ಆಗಿರುವಂತಹ ಶೀರ್ಷಿಕೆ ಇಡಲು ನಿರ್ಧಾರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ರಾಜಮೌಳಿ ಎರಡು ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದು, ಅದರಲ್ಲಿ ಒಂದನ್ನು ಪಕ್ಕಾ ಮಾಡಲಿದ್ದಾರೆ. ಮಹಾರಾಜ್ ಅಥವಾ ಚಕ್ರವರ್ತಿ ಎನ್ನುವ ಹೆಸರನ್ನು ರಾಜಮೌಳಿ ಆಯ್ಕೆ ಮಾಡಿದ್ದಾರೆ. ಈ ಸಿನಿಮಾಗೆ ಇಂಡೋನೇಷಿಯಾದ ನಟಿ ಚೆಲ್ಸಿಯಾ ಎಲಿಜಬೆತ್ ಇಸ್ಲಾನ್ ಅವರನ್ನು ನಾಯಕಿಯಾಗಿ ಚಿತ್ರತಂಡ ಫೈನಲ್ ಮಾಡಿದೆ ಎನ್ನುವ ಸುದ್ದಿಯೂ ಇದೆ.

Font Awesome Icons

Leave a Reply

Your email address will not be published. Required fields are marked *