ಬಾಲಿ ಪ್ರವಾಸದ ಸುಂದರ ಕ್ಷಣಗಳ ಫೋಟೋ ಹಂಚಿಕೊಂಡ ಸಮಂತಾ

ನವದೆಹಲಿ: ನಟಿ ಸಮಂತಾ ರುತ್ ಪ್ರಭು ಅವರು ಪ್ರಸ್ತುತ ಬಾಲಿ ಪ್ರವಾಸದಲ್ಲಿದ್ದು, ಅಲ್ಲಿನ ರಮಣೀಯ ಸೌಂದರ್ಯದ ಸುಂದರವಾದ ಸ್ನ್ಯಾಪ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಶುಕ್ರವಾರ, ನಟಿ ಸ್ನೇಹಿತೆ ಅನುಷಾ ಸ್ವಾಮಿ ಜೊತೆಗೆ ನೃತ್ಯ ಮಾಡುವ ರೀಲ್ಸ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಸಮಂತಾ ನೀಲಿ ಬಣ್ಣದ ಡೆನಿಮ್ ಶಾರ್ಟ್ಸ್ ಮತ್ತು ಬಿಳಿ ಸ್ನೀಕರ್ಸ್‌ನೊಂದಿಗೆ ಬಿಳಿ ಟಾಪ್ ಧರಿಸಿದ್ದಾರೆ. ಸನ್ ಗ್ಲಾಸ್‌ನೊಂದಿಗೆ ಧರಿಸಿ ರೀಲ್ಸ್‌ ಮಾಡುತ್ತಿರುವುದು ಚಿತ್ರದಲ್ಲಿದೆ.

ರೀಲ್‌ಗೆ “ಗರ್ಲ್ಸ್ ಟ್ರಿಪ್ 100/100” ಎಂದು ಶೀರ್ಷಿಕೆ ನೀಡಲಾಗಿದೆ. ವೀಡಿಯೊ 4.9 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ಇದಕ್ಕೆ ನಟಿ ರಾಕುಲ್ ಪ್ರೀತ್ ಸಿಂಗ್ ಕೆಂಪು ಹೃದಯದ ಎಮೋಜಿಯೊಂದಿಗೆ “ಕ್ಯೂಟಿ” ಎಂದು ಕಾಮೆಂಟ್ ಮಾಡಿದ್ದಾರೆ.

Font Awesome Icons

Leave a Reply

Your email address will not be published. Required fields are marked *