ಬಿಜೆಪಿ ತನ್ನ ಖಜಾನೆ ತುಂಬಿಸಿಕೊಂಡು ವಿಪಕ್ಷಗಳ ಖಾತೆ ಸೀಜ್ ಮಾಡಿದೆ- ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ. – Just Kannada – Online Kannada News | Breaking Kannada News | Karnataka News | Live Updates | ಕನ್ನಡ ನ್ಯೂಸ್




kannada t-shirts

ನವದೆಹಲಿ,ಮಾರ್ಚ್,21,2024(www.justkannada.in): ಕೇಂದ್ರ  ಸರ್ಕಾರ  ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಚುನಾವಣಾ ಬಾಂಡ್ ಗಳ ಮೂಲಕ ತನ್ನ ಖಜಾನೆ ತುಂಬಿಸಿಕೊಂಡಿದೆ. ಆದರೆ  ವಿಪಕ್ಷಗಳ ಬ್ಯಾಂಕ್ ಖಾತೆಗಳನ್ನ ಸೀಜ್ ಮಾಡಿದ್ದಾರೆ. ಹೀಗಾದರೇ ಚುನಾವಣೆಗಳು ನ್ಯಾಯ ಸಮ್ಮತವಾಗಿ ನಡೆಯಲು ಸಾಧ್ಯವೇ..? ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.

ಇಂದು ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಹಿರಿಯ ನಾಯಕಿ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜಂಟಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ , ಕೇಂದ್ರ ಸರ್ಕಾರ ಇಡಿ ಐಟಿ ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಮ್ಮ ಹಣವನ್ನ ಕಿತ್ತುಕೊಳ್ಳುವ ಪ್ರಯತ್ನ ಮಾಡಿತ್ತಿದೆ. ಚುನಾವಣಾ ಬಾಂಡ್ ಗಳು ಅಕ್ರಮ ಎಂದು ಸುಪ್ರೀಂ ಹೇಳಿದೆ.  ಚುನಾವಣಾ ಬಾಂಡ್ ಮೂಲಕ ಹಣ ಪಡೆಯಲಾಗುತ್ತದೆ.  ಆದರೆ ನಮ್ಮ ಬ್ಯಾಂಕ್ ಅಕೌಂಟ್ ಗಳನ್ನ ಸೀಜ್ ಮಾಲಾಗಿದೆ ಮೋದಿ ಕಾಂಗ್ರೆಸ್ ವಿರುದ್ದ ಷಡ್ಯಂತ್ರ ನಡೆಸುತ್ತಿದ್ದಾರೆ . ನಮ್ಮ ಅಕೌಂಟ್ ನ 250 ಕೋಟಿ ಬಳಕೆ ಮಾಡಲು ಆಗುತ್ತಿಲ್ಲ.  31 ವರ್ಷಗಳ ಹಿಂದಿನ ಪ್ರಕರಣ ಸಂಬಂಧ ಅಕೌಂಟ್ ಸೀಜ್ ಮಾಡಲಾಗಿದೆ . ಚುನಾವಣಾ  ಬಾಂಡ್ ಗಳು  ಬಿಜೆಪಿ ಖಜಾನೆ ತುಂಬಿಸಿವೆ.  ಯಾವ ಪಕ್ಷಕ್ಕೂ ಇಲ್ಲದ ನಿಯಮ ಕಾಂಗ್ರೆಸ್ ಪಕ್ಷಕ್ಕೆ ಯಾಕೆ..? ಎಂದು ಸಿಡಿಮಿಡಿಗೊಂಡರು.

ಚುನಾವಣಾ ಬಾಂಡ್‌ಗಳಿಂದ ಬಿಜೆಪಿಯ ಖಜಾನೆ ತುಂಬಿದೆ. ಆದರೆ ನಮ್ಮ ಪಕ್ಷದ ಬ್ಯಾಂಕ್‌ ಖಾತೆಯನ್ನು ಫ್ರೀಜ್ ಮಾಡಲಾಗಿದೆ. ವಿರೋಧ ಪಕ್ಷಗಳ ಬ್ಯಾಂಕ್‌ ಖಾತೆಯನ್ನು ಗುರಿಯಾಗಿಸಲಾಗಿದೆ. ನಮ್ಮ ಪಕ್ಷಕ್ಕೆ ಶೇ11ರಷ್ಟು ಹಣ ಸಂಗ್ರಹವಾಗಿದೆ. ಆದರೆ ಚುನಾವಣಾ ಬಾಂಡ್‌ಗಳಿಂದ ಬಿಜೆಪಿಗೆ ಶೇ56ರಷ್ಟು ಹಣ ಸಂಗ್ರಹವಾಗಿದೆ ಸಾಂವಿಧಾನಿಕ ಸಂಸ್ಥೆಗಳಿಗೆ ಮನವಿ ಮಾಡುತ್ತೇನೆ. ಆದಷ್ಟು ಬೇಗ ನಮ್ಮ ಅಕೌಂಟ್ ಗಳನ್ನ ರಿಲೀಸ್ ಮಾಡಿ ಎಂದು ಮನವಿ ಮಾಡಿದರು.

Key words: Misuse – central –investigative- agencies- Bank accounts – opposition-seized-Mallikarjuna Kharge

website developers in mysore






Previous articleಮಾ.24 ರಂದು ಮೈಸೂರಿನಲ್ಲಿ ಎಸ್ಟಿ ಮೋರ್ಚಾ ಮುನ್ನಡೆ ಸಮಾವೇಶ- ಮಾಜಿ ಮೇಯರ್ ಶಿವಕುಮಾರ್.


Font Awesome Icons

Leave a Reply

Your email address will not be published. Required fields are marked *