ಬಿಸಿಲಿನ ಧಗೆಯಿಂದ ಬರಡಾದ ಜಿಲ್ಲೆಗೆ ತಂಪೆರೆದ ವರುಣ

ಕೊಪ್ಪಳ: ಬಿಸಿಲಿನ ಧಗೆಯಿಂದ ಭೂಮಿ ಬರಡಾಗಿ ನಿಂತಿದೆ. ಬಿಸಿಲಿನ ಏರಿದ ಕಾವಿನಿಂದ ನೀರು ಮರೆಯಾಗಿದೆ. ಇಂತಹ ಸಮಯದಲ್ಲಿ ಬರದನಾಡು ಕೊಪ್ಪಳದಲ್ಲಿ ಜನರ ಪ್ರಾರ್ಥನೆಗೆ ವರುಣ ಒಲಿದು ಜಿಲ್ಲೆಯನ್ನು ತಂಪೆರಿದಿದ್ದಾನೆ.ಬರಗಾಲದಲ್ಲೂ ವರುಣನ ಆಗಮನ ಖುಷಿ ತಂದಿದೆ.

ಜಿಲ್ಲೆಯ ಹಲವಡೆ ಬಿರುಸಾದ ಮಳೆ ಸುರಿದಿದ್ದು , ಈ ವರ್ಷ ಮಳೆ ಸಮೃದ್ಧವಾಗಲಿ, ರೈತರ ಬಾಳು ಬೆಳಗಲಿ ಎಂದು ರೈತರು ಮಳೆರಾಯನಲ್ಲಿ ಬೇಡಿಕೊಂಡಿದ್ದಾರೆ.ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಗಾಳಿ ಮಳೆಯಿಂದ ಮನೆಯ ತಗಡಿನ ಛಾವಣಿ ಹಾರಿ ಹೋದ ಘಟನೆ ನಡೆದಿದೆ. ಗ್ರಾಮದ ದೇವಪ್ಪ ಗುಡದಾನೂರು ಎಂಬುವವರಿಗೆ ಸೇರಿದ ಮನೆಯ ಮೇಲೆ ಹಾಕಲಾಗಿದ್ದ ತಗಡಿನ ಛಾವಣಿ ಹಾರಿ ಹೋಗಿತ್ತು. ಅದೃಷ್ಟವಶಾತ್‌ ಯಾವುದೇ ಹಾನಿ ಉಂಟಾಗಿಲ್ಲ.

Font Awesome Icons

Leave a Reply

Your email address will not be published. Required fields are marked *