ಬೀದರ್‌ ಜಿಲ್ಲೆಯಲ್ಲಿ ಇಳಿಮುಖವಾಗುತ್ತಿದೆ ರಸ್ತೆ ಅಪಘಾತ

ಬೀದರ್: ಬೀದರ್‌ ಜಿಲ್ಲೆಯಲ್ಲಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುವವರ ಮರಣ ಪ್ರಮಾಣ ಕಡಿಮೆಯಾಗುತ್ತಿದ್ದು, ಜಿಲ್ಲಾ ಪೊಲೀಸ್‌ ಇಲಾಖೆ ಕೈಗೊಂಡ ಕ್ರಮಗಳಿಂದ ಈಗ ಅದರ ಉತ್ತಮ ಫಲಿತಾಂಶ ಹೊರಬರುತ್ತಿದೆ.

2022 ಹಾಗೂ 2023ನೇ ಸಾಲಿನ ರಸ್ತೆ ಅಪಘಾತಗಳಲ್ಲಿ ಮರಣ ಹೊಂದಿದವರ ಸಂಖ್ಯೆಯಲ್ಲಿ ಹೆಚ್ಚಿನ ವ್ಯತ್ಯಾಸವಿಲ್ಲ.

ಆದರೆ, 2023ನೇ ಸಾಲಿನ ಜನವರಿಯಿಂದ ಜೂನ್‌ ಹಾಗೂ ಜುಲೈನಿಂದ ಡಿಸೆಂಬರ್‌ ವರೆಗಿನ ಅಂಕಿ ಸಂಖ್ಯೆಗಳನ್ನು ತಾಳೆ ಮಾಡಿ ನೋಡಿದರೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಸಂಖ್ಯೆ ಕುಸಿಯುತ್ತಿರುವುದು ಗೊತ್ತಾಗುತ್ತದೆ.

2022ನೇ ಸಾಲಿನಲ್ಲಿ ರಸ್ತೆ ಅಪಘಾತಗಳಲ್ಲಿ ಒಟ್ಟು 334 ಜನ ಮರಣ ಹೊಂದಿದ್ದರು. 1,505 ಜನ ಗಾಯಗೊಂಡಿದ್ದರು. 2023ನೇ ಸಾಲಿನಲ್ಲಿ ಒಟ್ಟು 335 ಜನ ಸಾವನ್ನಪ್ಪಿದ್ದಾರೆ. 2022ನೇ ಸಾಲಿಗೆ ಹೋಲಿಸಿದರೆ ಒಂದು ಸಾವು ಹೆಚ್ಚಿಗೆ ಸಂಭವಿಸಿದೆ. ಇನ್ನು, 1,404 ಜನ ಗಾಯಗೊಂಡಿದ್ದು, ಗಾಯಾಳುಗಳ ಸಂಖ್ಯೆ ತಗ್ಗಿದೆ.

ಆದರೆ, ಇಲ್ಲಿ ಗಮನಿಸಬೇಕಾದ ಪ್ರಮುಖ ವಿಷಯವೇನೆಂದರೆ 2023ನೇ ಸಾಲಿನ ಜನವರಿಯಿಂದ ಜೂನ್‌ ತನಕ ಒಟ್ಟು 198 ಜನ ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ. ನಂತರದ ಆರು ತಿಂಗಳಲ್ಲಿ (ಜುಲೈನಿಂದ ಡಿಸೆಂಬರ್‌ ವರೆಗೆ) 137 ಜನ ಸತ್ತಿದ್ದಾರೆ. ಮೊದಲ ಆರು ತಿಂಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆಗೆ ಹೋಲಿಸಿದರೆ ನಂತರದ ಆರು ತಿಂಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮರಣ ಹೊಂದಿದವರ ಸಂಖ್ಯೆ ಇಳಿಮುಖವಾಗಿದೆ.

Font Awesome Icons

Leave a Reply

Your email address will not be published. Required fields are marked *