ಬೀದರ್‌ ಜಿಲ್ಲೆಯ ಏಳು ಸಾರಾಯಿ ಅಂಗಡಿಗಳಿಗೆ ಕನ್ನ; ಆರು ಜನರ ಬಂಧನ

ಬೀದರ್‌: ಜಿಲ್ಲೆಯ ಏಳು ಸಾರಾಯಿ ಅಂಗಡಿಗಳಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಜನರನ್ನು ಬುಧವಾರ ಬಂಧಿಸಿದ್ದಾರೆ.

ಕಳ್ಳತನಕ್ಕೆ ಸಂಬಂಧಿಸಿದಂತೆ ಐದು ಜನರನ್ನು ಹಾಗೂ ಕಳವು ಮಾಡಿದ ಮದ್ಯವನ್ನು ಖರೀದಿಸಿದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರಿಂದ ₹19 ಸಾವಿರ ಮೌಲ್ಯದ 43,200 ಎಂ.ಎಲ್‌. ಮದ್ಯ, ₹4.25 ಲಕ್ಷ ನಗದು, ₹30 ಸಾವಿರ ಬೆಲೆಯ ಬೈಕ್‌, ₹5 ಲಕ್ಷದ ಟಾಟಾ ಏಸ್‌ ವಾಹನ, ಶಟರ್‌ ಎತ್ತಲು ಬಳಸಿದ ಕಬ್ಬಿಣದ ಹಾರೆ, ಎರಡು ಕಬ್ಬಿಣದ ರಾಡುಗಳನ್ನು ಸೇರಿದಂತೆ ಒಟ್ಟು ₹9.74 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ಬುಧವಾರ ತಿಳಿಸಿದ್ದಾರೆ.

ಬಸವಕಲ್ಯಾಣ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಮೂರು, ಹುಮನಾಬಾದ್‌ ಪೊಲೀಸ್‌ ಠಾಣೆಯಲ್ಲಿ ಎರಡು, ಮೆಹಕರ್‌ ಹಾಗೂ ಧನ್ನೂರ ಪೊಲೀಸ್‌ ಠಾಣೆ ವ್ಯಾಪ್ತಿಯ ವೈನ್‌ಶಾಪ್‌ಗಳಲ್ಲಿ ಕಳವು ಮಾಡಿದ್ದರು ಎಂದು ವಿವರಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *