ಬೀದರ್: ಸರ್ವೀಸ್‌ ರಸ್ತೆಯಲ್ಲಿ ವಾಹನಗಳ ನಿಲುಗಡೆ!

ಔರಾದ್: ತಾಲ್ಲೂಕಿನಿಂದ ಹಾದು ಹೋದ ರಾಷ್ಟ್ರೀಯ ಹೆದ್ದಾರಿ-161ಎ ಕಾಮಗಾರಿ ಪೂರ್ಣ ಆಗದೆ ಪ್ರಯಾಣಿಕರಲ್ಲಿ ಹಾಗೂ ಹೆದ್ದಾರಿ ಬದಿಯಲ್ಲಿರುವ ಗ್ರಾಮಗಳ ಜನರು ಸಂಕಷ್ಟ ಅನುಭವಿಸುವಂತಾಗಿದೆ. ಬೀದರ್‌ನಿಂದ ವನಮಾರಪಳ್ಳಿ ವರೆಗಿನ ಈ ರಸ್ತೆ ಕಾಮಗಾರಿ ವೈಜ್ಞಾನಿಕವಾಗಿ ನಡೆದಿಲ್ಲ. ಹೀಗಾಗಿ ಅವಘಡಗಳು ಸಂಭವಿಸುತ್ತಿವೆ. ಕಳೆದ ಒಂದೇ ವಾರದಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಸಾರ್ವಜನಿಕರ ಆರೋಪ.

‘ಔರಾದ್ ತಾಲ್ಲೂಕು ಕೇಂದ್ರದ ಬಳಿ ಸರ್ವೀಸ್ ರಸ್ತೆ ಇದ್ದೂ ಇಲ್ಲದಂತಿದೆ. ಸರ್ವೀಸ್ ರಸ್ತೆಗೆ ಬೇಕಾಬಿಟ್ಟಿ ದಾರಿ ಬಿಡಲಾಗಿದೆ. ಹೀಗಾಗಿ ಸಣ್ಣ ಪುಟ್ಟ ಅಂಗಡಿಗಳು, ವಾಹನಗಳ ಪಾರ್ಕಿಂಗ್‌ ಪ್ರದೇಶವಾಗಿ ಸರ್ವೀಸ್ ರಸ್ತೆ ಬಳಕೆಯಾಗುತ್ತಿದೆ. ಇದರಿಂದ ಸುಗಮ ಸಂಚಾರಕ್ಕೆ ತೊಡಕಾಗಿದ್ದು, ಜನರು ಜೀವ ಕೈಯಲ್ಲಿ ಹಿಡಿದು ಪ್ರಯಾಣಿಸಬೇಕಾಗಿದೆ’ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಬೀದರ್-ಔರಾದ್ ರಸ್ತೆ ಮೇಲೆ ನಿರಂತರ ಅವಘಡಗಳು ಸಂಭವಿಸುತ್ತಿವೆ. ಮೊನ್ನೆ ಧರಿ ಹನುಮಾನ ಬಳಿ ಇಬ್ಬರು ಬೈಕ್ ಸವಾರರು ಮೃತಪಟ್ಟಿದ್ದಾರೆ. ವನಮಾರಪಳ್ಳಿ ಬಳಿ ಒಬ್ಬ ಸವಾರ ಪ್ರಾಣ ಕಳೆದುಕೊಂಡಿದ್ದಾರೆ. ಈ ರಸ್ತೆ ಮೇಲೆ ಹೀಗೇಕೆ ಆಗುತ್ತಿದೆ ಎಂಬುದರ ಕುರಿತು ಪರಿಶೀಲನೆ ನಡೆಸಬೇಕು. ರಸ್ತೆ ಕಾಮಗಾರಿಯಲ್ಲಿ ದೋಷ ಆಗಿದ್ದರೆ ಸರಿಪಡಿಸಿ ಆಗುವ ಜೀವ ಹಾನಿ ತಪ್ಪಿಸಬೇಕು’ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಧನರಾಜ ಮುಸ್ತಾಪುರ ಆಗ್ರಹಿಸುತ್ತಾರೆ.

ಬೀದರ್-ಔರಾದ್ ಹೆದ್ದಾರಿಗೆ ಸಂಬಂಧಿಸಿದಂತೆ ಈಚೆಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರು ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಔರಾದ್ ಪಟ್ಟಣ ಸೇರಿದಂತೆ ವಿವಿಧೆಡೆ ಸರ್ವೀಸ್ ರಸ್ತೆಯಲ್ಲಿನ ದೋಷ ಸರಿಪಡಿಸಲು ಸಂಬಂಧಿತರಿಗೆ ಸೂಚನೆ ನೀಡಿದ್ದಾರೆ ಎಂದು ಸಿಪಿಐ ರಘುವೀರಸಿಂಗ್ ಠಾಕೂರ್ ತಿಳಿಸಿದ್ದಾರೆ.

ಸರ್ವೀಸ್ ರಸ್ತೆ ಮೇಲೆ ಯಾರೂ ವಾಹನ ನಿಲ್ಲಿಸಬಾರದು. ಅದರ ಮೇಲೆ ಅಂಗಡಿ ನಡೆಸುವುದು ನಿಯಮ ಬಾಹಿರ. ಯಾರೇ ನಿಯಮ ಉಲ್ಲಂಘಿಸಿದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

‘ನಿಯಮ ಉಲ್ಲಂಘಿಸಿದರೆ ಕ್ರಮ’

ಬೀದರ್-ಔರಾದ್ ಹೆದ್ದಾರಿಗೆ ಸಂಬಂಧಿಸಿದಂತೆ ಈಚೆಗೆ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಅವರು ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಔರಾದ್ ಪಟ್ಟಣ ಸೇರಿದಂತೆ ವಿವಿಧೆಡೆ ಸರ್ವೀಸ್ ರಸ್ತೆಯಲ್ಲಿನ ದೋಷ ಸರಿಪಡಿಸಲು ಸಂಬಂಧಿತರಿಗೆ ಸೂಚನೆ ನೀಡಿದ್ದಾರೆ’ ಎಂದು ಸಿಪಿಐ ರಘುವೀರಸಿಂಗ್ ಠಾಕೂರ್ ತಿಳಿಸಿದ್ದಾರೆ. ‘ಸರ್ವೀಸ್ ರಸ್ತೆ ಮೇಲೆ ಯಾರೂ ವಾಹನ ನಿಲ್ಲಿಸಬಾರದು. ರಸ್ತೆ ಮೇಲೆ ಅಂಗಡಿ ನಡೆಸುವುದು ನಿಯಮ ಬಾಹಿರ. ಯಾರೇ ನಿಯಮ ಉಲ್ಲಂಘಿಸಿದರೂ ಅವರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಸಿಪಿಐ ಠಾಕೂರ್‌ ಎಚ್ಚರಿಸಿದ್ದಾರೆ.

Font Awesome Icons

Leave a Reply

Your email address will not be published. Required fields are marked *