ಬೆಂಗಳೂರಲ್ಲಿ ನೆಲಕ್ಕೆ ಉರುಳಿ ಬಿದ್ದ 40 ಅಡಿ ಎತ್ತರದ ಶ್ರೀರಾಮನ ಕಟೌಟ್

ಬೆಂಗಳೂರು: ನಗರದ ನಂದಿನಿ ಲೇಔಟ್​ನ ಕೃಷ್ಣಾನಂದ ನಗರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ 40 ಅಡಿಯ ರಾಮನ ಕಟೌಟ್ ನೆಲಕ್ಕೆ ಉರುಳಿ ಬಿದ್ದಿದೆ.

ಈ ಘಟನೆ ರಾತ್ರಿ ಸುಮಾರು 12:30 ರ ಸುಮಾರಿಗೆ ಸಂಭವಿಸಿದೆ. ಗಾಳಿಗೆ ಬಿತ್ತಾ ಅಥವಾ ಕಿಡಿಗೇಡಿಗಳು ಕೃತ್ಯನಾ ಎಂಬ ಅನುಮಾನ ಶುರುವಾಗಿದೆ. ಮಾಹಿತಿ ಪಡೆದ ತಕ್ಷಣವೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸ್ಥಳದಲ್ಲಿದ್ದ ಸಿಸಿ ಕ್ಯಾಮರಾಗಳ ಪರಿಶೀಲನೆಗೆ ಪೊಲೀಸರು ಮುಂದಾಗಿದ್ದಾರೆ.

Font Awesome Icons

Leave a Reply

Your email address will not be published. Required fields are marked *